ಪಾಕ ವಿಧಾನ: ಚಿಕನ್ಗೆ ಉಪ್ಪು, ಖಾರದ ಪುಡಿ ಮತ್ತು ಎಣ್ಣೆ ಹಾಕಿ 1 ಗಂಟೆಗಳ ಕಾಲ ನೆನೆಯಲು ಬಿಡಿ.
ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಲವಂಗ ದಾಲ್ಚೀನಿ, ಕರಿಬೇವು ಎಲ್ಲವನ್ನು ಸ್ವಲ್ಪ ಬಣ್ಣ ಬರುವವರೆಗೂ ಹುರಿದುಕೊಂಡು ನಂತರ ಅದಕ್ಕೆ ಸಣ್ಣದಾಗಿ ಹೆಚ್ಚಿದ ಈರುಳ್ಳಿ ಹಾಕಿಕೊಂಡು ಕಂದು ಬಣ್ಣ ಬರುವವರೆಗೂ ಹುರಿಯಿರಿ.
ಎಲ್ಲವನ್ನು ಚೆನ್ನಾಗಿ ಮಿಶ್ರ ಮಾಡಿ ಕೊನೆಯಲ್ಲಿ ಅದರಲ್ಲಿ ಚಿಕ್ಕನ್ ಬೆರಸಿ 5-6 ನಿಮಿಷ ಹೆಚ್ಚಿನ ಶಾಖದಲ್ಲಿ ಬೇಯಿಸಿ.