ಬೇಕಾಗುವ ಸಾಮಗ್ರಿಗಳು: ಮೊಟ್ಟೆ, ಬ್ರೆಡ್ 4-5 ಚೂರುಗಳು, 1 ಸಣ್ಣ ಈರುಳ್ಳಿ, 2-3 ಹಸಿರು ಮೆಣಸು, ಕೊತ್ತಂಬರಿ, ಉಪ್ಪು.
ಮಾಡುವ ವಿಧಾನ: ಬ್ರೆಡ್ಡನ್ನು ತೆಗೆದುಕೊಂಡು ಅದರ ಅದರ ಮೇಲೆ ಚೂಪಾಗಿರುವ ಬೌಲ್ ಅನ್ನು ಬಳಸಿಕೊಂಡು ಬ್ರೆಡ್ಡಿನ ಮಧ್ಯಭಾಗವನ್ನು ಕತ್ತರಿಸಿ. ಮೊಟ್ಟೆಯನ್ನು ಒಡೆದು ಅದನ್ನು ಚೆನ್ನಾಗಿ ಬೀಟ್ ಮಾಡಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಅದಕ್ಕೆ ಚೆನ್ನಾಗಿ ಕತ್ತರಿಸಿದ ಹಸಿರು ಮೆಣಸು ಹಾಗೂ ಈರುಳ್ಳಿ ಚೂರುಗಳನ್ನು ಹಾಕಿ. ಅದಕ್ಕೆ ಕೊತ್ತಂಬರಿ ಸೊಪ್ಪನ್ನೂ ಸೇರಿಸಿ. ಇವೆಲ್ಲವನ್ನೂ ಚೆನ್ನಾಗಿ ಕಲಸಿಡಿ. ನಂತರ ಮಧ್ಯಭಾಗ ಕತ್ತರಿಸಿ ತೆಗೆದ ಬ್ರೆಡ್ಡನ್ನು ಮೊದಲೇ ಬಿಸಿಮಾಡಿದ ಪಾನ್ ಮೇಲಿಡಿ. ಬ್ರೆಡ್ಡಿನ ಮಧ್ಯಭಾಗಕ್ಕೆ (ಕತ್ತರಿಸಿ ತೆಗೆದ ಭಾಗಕ್ಕೆ) ಒಂದು ಸೌಟಿನಷ್ಟು ಕಲಸಿಟ್ಟ ಮೊಟ್ಟೆಯ ಹಿಟ್ಟನ್ನು ಹುಯ್ಯಿರಿ. ಅದು ಬ್ರೆಡ್ಡಿನ ಬದಿಗಳಿಗೆ ತಾಕುವಂತಿರಲಿ. ಮೊಟ್ಟೆಯ ಹುಯಿದ ಹಿಟ್ಟು ಬೇಯುವವರೆಗೂ ಹಾಗೇಬಿಡಿ. ನಂತರ ಇನ್ನೊಂದು ಬದಿಯನ್ನೂ ಬೇಯಿಸಿ ಬ್ರೆಡ್ಡೂ ಕೂಡಾ ಟೋಸ್ಟ್ ಆಗುವವರೆಗೆ ಬಿಡಿ. ಈಗ ಬ್ರೆಡ್ ಆಮ್ಲೆಟ್ ರೆಡಿ.