ಬ್ರೆಡ್ ಆಮ್ಲೆಟ್

ಬೇಕಾಗುವ ಸಾಮಾಗ್ರಿಗಳು
ಮೊಟ್ಟೆ
4-5 ಸ್ಲೈಸ್ ಬ್ರೆಡ್
1 ಈರುಳ್ಳಿ
ಕೊತ್ತಂಬರಿ

ತಯಾರಿಸುವ ವಿಧಾನ:

ಬ್ರೆಡ್ ಸ್ಲೈಸ್‌ಗಳನ್ನು ತೆಗೆದುಕೊಂಡು ಹರಿತವಿರುವ ಪಾತ್ರೆಯಿಂದ ಬ್ರೆಡ್‌ನ ಮಧ್ಯಭಾಗವನ್ನು ಕತ್ತರಿಸಿ. ಮೊಟ್ಟೆಯನ್ನು ಒಡೆದು ಕಲಸಿ, ಉಪ್ಪು, ಕತ್ತರಿಸಿದ ಹಸಿರು ಮೆಣಸು, ಈರುಳ್ಳಿ, ಕೊತ್ತಂಬರಿ ಸೊಪ್ಪನ್ನು ಸೇರಿಸಿ ಮಿಶ್ರ ಮಾಡಿ. ಎಣ್ಣೆ ಹಾಕಿ ಮೊದಲೇ ಬಿಸಿ ಮಾಡಿದ ಬಾಣಲೆಯಲ್ಲಿ, ಮಧ್ಯಭಾಗ ತೆಗೆದ ಬ್ರೆಡ್ ಅನ್ನು ಹಾಕಿ. ಒಂದು ಚಮಚದಷ್ಟು ಮೊಟ್ಟೆಯ ಮಿಶ್ರಣವನ್ನು ತೆಗೆದುಕೊಂಡು ಬ್ರೆಡ್‌ನ ಮಧ್ಯಭಾಗಕ್ಕೆ ಸುರಿದು, ಸರಿಯಾಗಿ ಒತ್ತಿ ಅದು ಬ್ರೆಡ್‌ನ ಬದಿಯವರೆಗೂ ಹರಡುವಂತೆ ಮಾಡಿ. ಮೊಟ್ಟೆ ಬೇಯುವವರೆಗೆ ಕಾಯಿರಿ, ನಂತರ ಮಗುಚಿ ಹಾಕಿ. ಈಗ ಬ್ರೆಡ್ ಆಮ್ಲೆಟ್ ರೆಡಿ. ಅದರ ಮೇಲೆ ಸ್ವಲ್ಪ ಬೆಣ್ಣೆ ಸವರಿ ತಿನ್ನಲು ನೀಡಿ ರುಚಿಯಾಗಿರುತ್ತದೆ.

ವೆಬ್ದುನಿಯಾವನ್ನು ಓದಿ