ಬೆಣ್ಣೆ ಬಿಸಿ ಮಾಡಿ ಈರುಳ್ಳಿ ಹಾಕಿ ಹುರಿಯಿರಿ. ಮಸಾಲೆ ಪದಾರ್ಥ, ಬೆಳ್ಳಳ್ಳಿ ಹಾಕಿ 2 ನಿಮಿಷದವರೆಗೆ ಹುರಿಯಿರಿ. ನಂತರ ಮಾಂಸವನ್ನು ಹಾಕಿ ಚೆನ್ನಾಗಿ ಮಿಶ್ರ ಮಾಡಿ. ಮುಚ್ಚಳ ಮುಚ್ಚಿ ಸುಮಾರು ಅರ್ಧ ಗಂಟೆಯವರೆಗೆ ಬೇಯಿಸಿ. ಪದಾರ್ಥ ಗಟ್ಟಿಯಾಗದ ಹಾಗೆ ನೋಡಿಕೊಂಡು ಬೇಯಿಸಿ. ನಂತರ ಕ್ರೀಮ್, ಏಲಕ್ಕಿ ಪುಡಿ ಹಾಕಿ ಮಿಶ್ರ ಮಾಡಿ. ಮತ್ತೆ ಬೇಯಿಸಬೇಡಿ. ಮೇಲೆ ಕತ್ತರಿಸಿದ ಕೊತ್ತಂಬರಿ ಸೊಪ್ಪು ಹಾಕಿ ತಿನ್ನಲು ನೀಡಿ, ಪರಿಮಳಭರಿತವಾಗಿರುತ್ತದೆ.