ಮೆಂತ್ಯ ಚಿಕನ್ ಕರ್ರಿ

ಬೇಕಾಗುವ ಸಾಮಾಗ್ರಿಗಳು
ಬ್ರಾಯ್ಲರ್ ಚಿಕನ್ - 2 ಕೆದಿ
ಎಣ್ಣೆ- 6 ಟೇಬಲ್ ಚಮಚ
ಸಂಬಾರ
ದಾಲ್ಚೀನಿ- 2 ಕಡ್ಡಿ
ಏಲಕ್ಕಿ-4 ಕಡ್ಡಿ
ಲವಂಗ- 4
ಮೆಂತೆಸೊಪ್ಪು - ಒಂದು ಕಟ್ಟು
ಸಣ್ಣ ಈರುಳ್ಳಿ ಕತ್ತರಿಸಿದ್ದು- 4
ಬೆಳ್ಳುಳ್ಳಿ, ಶುಂಠಿ ಪೇಸ್ಟ್-2 ಟೇಬಲ್
ಜೀರಿಗೆ ಪುಡಿ-2 ಟೀ ಚಮಚ
ಅರಶಿನ- ಒಂದು ಟೀ ಚಮಚ
ಮೆಣಸಿನ ಪುಡಿ- 2 ಟೀ ಚಮಚ
ಕೊತ್ತಂಬರಿ ಬೀಜದ ಪುಡಿ- 2 ಟೇಬಲ್
ಟೊಮೇಟ್ ಕತ್ತರಿಸಿದ್ದು- 2(ದೊಡ್ಡದು)
ನೀರು- ಒಂದೂವರೆ ಬಟ್ಟಲು
ಉಪ್ಪು- 4 ಚಮಚ

ಪಾಕ ವಿಧಾನ
ಎಣ್ಣೆಯನ್ನು ಪ್ರೆಶರ್ ಕುಕ್ಕರ್‍‌ನಲ್ಲಿಟ್ಟು ಕಾಯಿಸಿ, ಸಂಬಾರಗಳನ್ನು ಎಣ್ಣೆಯಲ್ಲಿ ಒಂದು ನಿಮಿಷಗಳ ಕಾಲ ಹುರಿಯಿರಿ. ಮೆಂತ್ಯೆ ಸೊಪ್ಪಿನೆಲೆಗಳನ್ನು ಸೇರಿಸಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. ಇದಾದನಂತರ ಈರುಳ್ಳಿ ಪೇಸ್ಟ್ ಸೇರಿಸಿ ತೆಳು ಕಂದು ಬಣ್ಣ ಬರುವವರೆಗೆ ಒಂದು ನಿಮಿಷ ಹುರಿಯಿರಿ. ಬೆಳ್ಳುಳ್ಳಿ ಶುಂಠಿ ಪೇಸ್ಟ್ ಸೇರಿಸಿ ಕಂದು ಬಣ್ಣಕ್ಕೆ ಬರುವವರೆಗೆ ಒಂದು ನಿಮಿಷ ಹುರಿಯಿರಿ.

ವೆಬ್ದುನಿಯಾವನ್ನು ಓದಿ