ಮೊಟ್ಟೆ ಕಬಾಬ್

ಬೇಕಾಗುವ ಸಾಮಾನುಗಳು: ನಾಲ್ಕು ಬೇಯಿಸಿದ ಮೊಟ್ಟೆ ,ಒಂದು ಚಿಕ್ಕ ಈರುಳ್ಳಿ ,ಎರಡು ಹಸಿ ಮೆಣಸು ,2ಚಮಚ ಗ್ರಾಂ ಫ್ಲೋರ್ ,ಅರ್ಧ ಚಮಚ ಪೆಪ್ಪರ್ ಪೌಡರ್, ಕಾಲು ಚಮಚ ಕೆಂಪು ಮೆಣಸಿನ ಪುಡಿ , ಒಂದು ಚಮಚ ಕತ್ತರಿಸಿದ ಕೊತ್ತಂಬರಿ ಎಲೆ,ಒಂದು ಚಮಚ ಕತ್ತರಿಸಿದ ಪುದಿನಎಲೆ ,ಎಣ್ಣೆ ಹಾಗೂ ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಮೊಟ್ಟೆಗಳನ್ನು ತುಂಡರಿಸಿ ಒಂದು ಬೌಲ್‌ನಲ್ಲಿ ಹಾಕಿ ಪಕ್ಕಕ್ಕೆ ಇಡಿ.ಒಂದು ಪಾತ್ರೆಯಲ್ಲಿ ಪೆಪ್ಪರ್ ,ಚಿಲ್ಲಿ ಪೌಡರ್ ಕೋತಂಬರಿ , ಹಸಿಮೆಣಸಿನ ಕಾಯಿ , ಗ್ರಾಂಫ್ಲೋರ್ ,ಪುದಿನ ‌,ಈರುಳ್ಳಿ,ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಈ ಮಿಕ್ಸ್‌ನ್ನು ತುಂಡರಿಸಿದ ಮೊಟ್ಟೆಗೆ ಸೇರಿಸಿ . ನಂತರ ಈ ಮಿಶ್ರಣವನ್ನು ಚೆನ್ನಾಗಿ ಹದ ಮಾಡಿಕೊಂಡು .ಚಿಕ್ಕ ಚಿಕ್ಕ ಉಂಡೆ ಮಾಡಿ. ಇದನ್ನು ಪ್ರೆಸ್ ಮಾಡಿ.ಒಂದು ಪ್ಯಾನ್‌ನಲ್ಲಿ ಎಣ್ಣೆ ಚೆನ್ನಾಗಿ ಬಿಸಿ ಮಾಡಿಕೊಂಡು,ಇದನ್ನು ಫ್ರೈ ಮಾಡಿ .ಪುದಿನ ಚಟ್ನಿ ಜೊತೆ ಸವಿಯಿರಿ .

ವೆಬ್ದುನಿಯಾವನ್ನು ಓದಿ