ಸಂಡೇ ಸ್ಪೆಷಲ್! ಮಟನ್ ಖೈಮ ಮಾಡಿ

ಭಾನುವಾರ, 23 ಜನವರಿ 2022 (14:29 IST)
ಮನೆಯಲ್ಲಿ ನಿಮ್ಮ ಕೈಯಾರೆ ನೀವು ಬಯಸಿದ ರೀತಿ ಮಟನ್ ಖೀಮಾ ಮಾಡಿ ಸೇವನೆ ಮಾಡಬಹುದು.

ನೀವು ಮಾಡುವ ಮಟನ್ ಖೀಮಾ ಚಳಿಗಾಲಕ್ಕೆ ಹಾಗೂ ನಿಮ್ಮ ಭಾನುವಾರದ ಬಾಡೂಟಕ್ಕೆ ಬೆಸ್ಟ್ ರೆಸಿಪಿ ಆಗಿರಲಿದೆ.

ಬೇಕಾಗುವ ಸಾಮಗ್ರಿಗಳು

* ಮಟನ್ ಖೀಮಾ- ಅರ್ಧ ಕೆಜಿ
* ಲಿವರ್- ಕಾಲು ಕೆಜಿ
* ಈರುಳ್ಳಿ- 3
* ಬೆಳ್ಳುಳ್ಳಿ-1
* ಶುಂಠಿ – ಸ್ವಲ್ಪ
* ಹಸಿಮೆಣಸಿನ ಕಾಯಿ-1
* ಜೀರಿಗೆ- 1 ಚಮಚ
* ಕರಿಮೆಣಸಿನಕಾಳು- 1 ಚಮಚ
* ಚಕ್ಕೆ, ಲವಂಗ
* ಕೆಂಪು ಮೆಣಸಿನ ಪುಡಿ -1 ಚಮಚ
* ದನಿಯಾ- 1 ಚಮಚ
* ಟೊಮೆಟೋ- 1
* ಮೊಸರು- 2 ಚಮಚ
* ಕೊತ್ತಂಬರಿ ಸೊಪ್ಪು- ಸ್ವಲ್ಪ
* ಅಡುಗೆಎಣ್ಣೆ 2 ಚಮಚ
* ಪಲಾವ್ ಎಲೆ -1
* ರುಚಿಗೆ ತಕ್ಕ ಉಪ್ಪು

ಮಾಡುವ ವಿಧಾನ

* ಮೊಸರು, ಅರಿಶಿಣಪುಡಿ, ಖಾರದ ಪುಡಿ ಮತ್ತು ರುಚಿಗೆ ತಕ್ಕ ಉಪ್ಪು ಹಾಕಿ ಮಿಕ್ಸ್ ಮಾಡಿ. ಈ ಮಿಶ್ರಣವನ್ನು ನೆನೆಯಲು ಬಿಡಿ.

* ಬಳಿಕ ಮಟನ್ ಖೀಮಾ, ಉಪ್ಪು ಮತ್ತು ಒಂದು ಬಟ್ಟಲು ನೀರನ್ನು ಅದಕ್ಕೆ ಸೇರಿಸಿ ಕುಕ್ಕರ್ ಮುಚ್ಚಿ 5 ನಿಮಿಷಗಳ ಕಾಲ ಬೇಯಿಸಿ ಒಂದು ಪಾತ್ರೆಯಲ್ಲಿ ಹಾಕಿಡಬೇಕು. 

* ನಂತರ ಈರುಳ್ಳಿ , ಕರಿಮೆಣಸಿನ ಕಾಳು, ಜೀರಿಗೆ, ಚಕ್ಕೆ, ಲವಂಗ ಫ್ರೈ ಮಾಡಿ. ಈ ಫ್ರೈಗೆ ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ ಫ್ರೈ ಮಾಡಿ. ಬಳಿಕ ಇದನ್ನೂ ಅರೆದು ಗಟ್ಟಿ ಪೇಸ್ಟ್ ಮಾಡಿ ಇಟ್ಟುಕೊಳ್ಳಬೇಕು.

* ಮತ್ತೊಂದು ಪಾತ್ರೆಯಲ್ಲಿ ಅಡುಗೆ ಎಣ್ಣೆ, ಪಲಾವ್ ಎಲೆ, ಈರುಳ್ಳಿ, ಖೀಮಾ ಮತ್ತು ಲಿವರ್, ಹಸಿಮೆಣಸಿನ ಕಾಯಿ, ಸಂಬಾರ ಪೇಸ್ಟ್ ಹಾಕಿ ಚೆನ್ನಾಗಿ ಮಿಶ್ರ ಮಾಡಬೇಕು.

* ಟೊಮೆಟೊ, ಕೊತ್ತಂಬರಿ ಸೊಪ್ಪು , ಕೆಂಪು ಮೆಣಸಿನ ಪುಡಿ, ಕೊತ್ತಂಬರಿ ಪುಡಿ, ರುಚಿಗೆ ತಕ್ಕ ಉಪ್ಪು ಹಾಕಿ ಮಿಶ್ರಣ ಮಾಡಿ ಬೇಯಿಸಬೇಕು. ನಂತರ 2 ಚಮಚ ಮೊಸರು, ಈಗಾಗಲೇ ತಯಾರಿಸಿದ ಮಸಾಲೆಯನ್ನು ಹಾಕಿ ಬೇಯಿಸಿದರೆ ರುಚಿಯಾದ ಖೀಮಾ ಸವಿಯಲು ಸಿದ್ಧವಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ