ಈರುಳ್ಳಿ ಫ್ರೈಡ್ ಚಿಕನ್

ಬೇಕಾಗುವ ಸಾಮಾಗ್ರಿಗಳು

ಐದು ತುಂಡುಗಳಾಗಿ ಮಾಡಿದ 500 ಗ್ರಾಂ. ಕೋಳಿಮಾಂಸ
4 ಈರುಳ್ಳಿ, ತುರಿದ ತೆಂಗಿನಕಾಯಿ
4 ಬೆಳ್ಳುಳ್ಳಿ, 1 ಟೊಮಾಟೊ
½ ಕಪ್ ಮೊಸರು, ಕೊತ್ತಂಬರಿ ಸೊಪ್ಪಿನ ಪೇಸ್ಟ್
1 ಟೀಸ್ಪೂನ್ ನಿಂಬೆ ರಸ, ಶುಂಠಿ ಪುಡಿ
½ ಟೀಸ್ಪೂನ್ ಮೆಣಸಿನ ಪುಡಿ, ಕರಿಮೆಣಸು, ಕೊತ್ತಂಬರಿ ಪುಡಿ, ಜೀರಿಗೆ ಪುಡಿ
1 ಸ್ಪೂನ್ ತುಪ್ಪ

ತಯಾರಿಸುವ ವಿಧಾನ:
ಟೊಮಾಟೊವನ್ನು ಕತ್ತರಿಸಿ, ಈರುಳ್ಳಿಯನ್ನು ಸುರುಳಿಯಾಕಾರವಾಗಿ ಕತ್ತರಿಸಿಕೊಂಡು ತಯಾರಿ ಮಾಡಿಟ್ಟುಕೊಳ್ಳಿ. ಮಾಂಸವನ್ನು ತೆಗೆದುಕೊಂಡು ಅದರಲ್ಲಿ ಸೀಳುಗಳನ್ನು ಮಾಡಿ. ಮೊಸರು, ಕೊತ್ತಂಬರಿ ಪೇಸ್ಟ್ ಹಾಕಿ ಮಿಶ್ರ ಮಾಡಿ. ಚೆನ್ನಾಗಿ ಮಿಶ್ರಣ ಮಾಡಿದ ನಂತರ ಈರುಳ್ಳಿಯ ಸುರುಳಿಗಳನ್ನು ಹಾಕಿ, ಮತ್ತೊಮ್ಮೆ ಮಿಶ್ರ ಮಾಡಿ ಅದನ್ನು ಒಂದು ಗಂಟೆಯವರೆಗೆ ಹಾಗೇ ಇಡಿ. ನಂತರ ಸುಮಾರು 12 ನಿಮಿಷಗಳವರೆಗೆ ಬೇಯಿಸಿ. ತುಪ್ಪ ಹಾಗೂ ಉಳಿದ ಎಲ್ಲಾ ಪದಾರ್ಥಗಳನ್ನು ಹಾಕಿ ಆ ಮಿಶ್ರಣವನ್ನು ಮತ್ತೆ 5-7 ನಿಮಿಷಗಳವರೆಗೆ ಬೇಯಿಸಿ. ಮಾಂಸ ಚೆನ್ನಾಗಿ ಬೆಂದು, ಮಸಾಲೆಯನ್ನು

ಹೀರಿಕೊಳ್ಳುವವರೆಗೆ ಬೇಯಿಸಿರಿ. ಈಗ ಈರುಳ್ಳಿ ಚಿಕನ್ ಸಿದ್ಧ."

ವೆಬ್ದುನಿಯಾವನ್ನು ಓದಿ