ಎಗ್ ಬ್ರೆಡ್ ರೋಲ್

ಬೇಕಾಗುವ ಸಾಮಗ್ರಿ: 6 ಪೀಸು ಬ್ರೆಡ್ಡು, ಎರಡು ಮೊಟ್ಟೆ, 1 ಕಪ್ ತರಕಾರಿ (ಕ್ಯಾರೆಟ್, ಬೀನ್ಸ್, ಬಟಾಣಿ, ಜೋಳ), ಎರಡು ಬೀಟ್‌ರೂಟ್, ಒಂದು ಬೇಯಿಸಿದ ದೊಡ್ಡ ಆಲೂಗಡ್ಡೆ, 1 ಈರುಳ್ಳಿ, ಎರಡು ಚಮಚ ಶುಂಠಿ ಪೇಸ್ಟ್, ಒಂದು ಚಮಚ ನಿಂಬೆ ಜ್ಯೂಸ್, ಎರಡು ಚಮಚ ಬಾದಾಮಿ ಚೂರುಗಳು, ಒಂದು ಚಮಚದಷ್ಟು ಸಣ್ಣದಾಗಿ ಕತ್ತರಿಸಿದ ಹಸಿಮೆಣಸಿನ ಚೂರುಗಳು, ಕಾಲು ಕಪ್ ಎಣ್ಣೆ, ಉಪ್ಪು, ಕರಿಮೆಣಸಿನ ಪುಡಿ.

ಮಾಡುವ ವಿಧಾನ: ಒಂದು ಕಪ್ ತರಕಾರಿ (ಕ್ಯಾರೆಟ್, ಬೀನ್ಸ್, ಬಟಾಣಿ, ಜೋಳ) ಹಾಗೂ ಬೀಟ್‌ರೂಟುಗಳನ್ನು ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಿ. ಪಾತ್ರೆಯೊಂದರಲ್ಲಿ ಬೇಯಿಸಿದ ತರಕಾರಿಗಳನ್ನು ಹಾಗೂ ಬೇಯಿಸಿದ ಆಲೂಗಡ್ಡೆಯನ್ನು ಚೆನ್ನಾಗಿ ಜಜ್ಜಿ. ಅದಕ್ಕೆ ಕತ್ತರಿಸಿದ ಈರುಳ್ಳಿ, ಬಾದಾಮಿ, ಶುಂಠಿ, ನಿಂಬೆರಸ, ಹಸಿಮೆಣಸು, ಉಪ್ಪು, ಕರಿಮೆಣಸಿನ ಪುಡಿ ಹಾಕಿ ಮಿಕ್ಸ್ ಮಾಡಿ. ಪ್ರತ್ಯೇಕ ಪಾತ್ರೆಯಲ್ಲಿ ಮೊಟ್ಟೆಯನ್ನು ಒಡೆದು, ಚೆನ್ನಾಗಿ ಬೀಟ್ ಮಾಡಿ. ಪಾನ್‌ನಲ್ಲಿ ಎಣ್ಣೆ ಬಿಸಿಮಾಡಿ. ಬ್ರೆಡ್‌ನ ಒಂದು ಪೀಸನ್ನು ತೆಗೆದು ಅದನ್ನು ಬಿಸಿನೀರಿನಿಂದ ತಟ್ಟಿ ಮೆತ್ತಗಾಗುವಂತೆ ಮಾಡಿ. ಮೆತ್ತಗೆ ಮಾಡಿದ ಬ್ರೆಡ್ ಪೀಸಿನ ಮಧ್ಯದಲ್ಲಿ ಜಜ್ಜಿದ ತರಕಾರಿ ಮಿಶ್ರಣವನ್ನು ಹಾಕಿ ಅದರ ಮೂಲೆಗಳನ್ನು ಮಡಚಿ ಬೀಟಿ ಮಾಡಿಟ್ಟ ಮೊಟ್ಟೆಯಲ್ಲಿ ಅದ್ದಿ ತೆಗೆದು ಹೊಂಬಣ್ಣಬರುವವರೆಗೆ ಎಣ್ಣೆಯಲ್ಲಿ ಕರಿಯಿರಿ. ಈಗ ಎಗ್ ಬ್ರೆಡ್ ರೋಲ್ ಸಿದ್ಧ.

ವೆಬ್ದುನಿಯಾವನ್ನು ಓದಿ