ಬೇಕಾಗುವ ಸಾಮಾನುಗಳು : ಬಾಯ್ಲರ್ ಚಿಕನ್ - 2 ಕೆಜಿ ಮಧ್ಯಮ ಗಾತ್ರದಲ್ಲಿ ತುಂಡರಿಸಿದ್ದು ಚಮಚ ಎಣ್ಣೆ- 6 ಟೇಬಲ್ ಚಮಚ ಸಾಸಿವೆ- 1 ಟಿ ಚಮಚ ಈರುಳ್ಳಿ ಕತ್ತರಿಸಿದ್ದು- 2 ವಿನೆಗಾರ್‍ನಲ್ಲಿ ಮಸಾಲೆಗಳನ್ನು ರುಬ್ಬಿ ಪೇಸ್ಟ್ ಮಾಡಲು ಒಣ ಮೆಣಸಿನ ಕಾಯಿ- 20 ಜೀರಿಗೆ ಪುಡಿ- 2 ಟೀ ಚಮಚ ಬೆಳ್ಳುಳ್ಳಿ- 2 ಹಿಳುಕು ಶುಂಠಿ ತುಂಡು-2 ಅರಶಿನ- 1 ಟೀ ಚಮಚ ವಿನೇಗಾರ್ -3 ಟೇಬಲ್ ಚಮಚ ಉಪ್ಪು-4 ಟೀ ಚಮಚ ನೀರು- ಎರಡೂವರೆ ಬಟ್ಟಲು ಸಕ್ಕರೆ- ಒಂದು ಟೀ ಚಮಟ ವಿನೇಗಾರ್-ಒಂದು ಟೀ ಚಮಚ
ಪಾಕ ವಿಧಾನ
ಎಣ್ಣೆಯನ್ನು ಕಾಯಿಸಿದ ನಂತರ ಸಾಸಿವೆ ಕತ್ತರಿಸಿದ ಈರುಳ್ಳಿ ಸೇರಿಸಿ ತೆಳು ಕಂದು ಬಣ್ಣ ಬರುವವರೆಗೆ ಒಂದು ನಿಮಿಷಗಳ ಕಾಲ ಹುರಿಯಿರಿ. ಎಲ್ಲಾ ಮಸಾಲೆ ಪದಾರ್ಥಗಳನ್ನಿ ಅರೆದು ಪೇಸ್ಟ್ ಮಾಡಿ ಒಂದು ನಿಮಿಷ ಹುರಿಯಿರಿ. ಇದಕ್ಕೆ ಚಿಕನ್ ತುಂಡು ಸೇರಿಸಿ, ನೀರು ಉಪ್ಪು ಹಾಕಿ ಐದು ನಿಮಿಷ ಒತ್ತಡದಲ್ಲಿ ಬೇಯಿಸಿ. ಚಿಕನ್ ತುಂಡುಗಳು ಚೆನ್ನಾಗಿ ಬೆಂದಾಗ ಒಂದು ಟೀ ಚಮಚ ಸಕ್ಕರೆ ಮತ್ತು ಒಂದು ಟೀ ಚಮಚ ವಿನೇಗಾರ್ ಸೇರಿಸಿ. ಈಗ ಚಿಕನ್ ವಿಂಡಾಲೂ ತಯಾರ್