ಚಿಕನ್ ವಿಂಡಾಲೂ ಫ್ರೈ

ಶುಕ್ರವಾರ, 1 ಅಕ್ಟೋಬರ್ 2010 (12:01 IST)
ಬೇಕಾಗುವ ಸಾಮಗ್ರಿ: ಬ್ರಾಯ್ಲರ್ ಚಿಕನ್, ಎಣ್ಣೆ, ಸಾಸಿವೆ, ಈರುಳ್ಳಿ, ಮಸಾಲಾ, ಒಣ ಮೆಣಸಿನ ಕಾಯಿ, ಜೀರಿಗೆ ಪುಡಿ, ಬೆಳ್ಳುಳ್ಳಿ, ಶುಂಠಿ, ಅರಶಿನ, ವಿನೇಗಾರ್, ಉಪ್ಪು,ಸಕ್ಕರೆ, ವಿನೇಗಾರ್

ಪಾಕ ವಿಧಾನ: ಎಣ್ಣೆಯನ್ನು ಕಾಯಿಸಿದ ನಂತರ ಸಾಸಿವೆ ಕತ್ತರಿಸಿದ ಈರುಳ್ಳಿ ಸೇರಿಸಿ ತೆಳು ಕಂದು ಬಣ್ಣ ಬರುವವರೆಗೆ ಒಂದು ನಿಮಿಷಗಳ ಕಾಲ ಹುರಿಯಿರಿ. ಎಲ್ಲಾ ಮಸಾಲೆ ಪದಾರ್ಥಗಳನ್ನಿ ಅರೆದು ಪೇಸ್ಟ್ ಮಾಡಿ ಒಂದು ನಿಮಿಷ ಹುರಿಯಿರಿ. ಇದಕ್ಕೆ ಚಿಕನ್ ತುಂಡು ಸೇರಿಸಿ, ನೀರು ಉಪ್ಪು ಹಾಕಿ ಐದು ನಿಮಿಷ ಒತ್ತಡದಲ್ಲಿ ಬೇಯಿಸಿ. ಚಿಕನ್ ತುಂಡುಗಳು ಚೆನ್ನಾಗಿ ಬೆಂದಾಗ ಒಂದು ಟೀ ಚಮಚ ಸಕ್ಕರೆ ಮತ್ತು ಒಂದು ಟೀ ಚಮಚ ವಿನೇಗಾರ್ ಸೇರಿಸಿ. ಈಗ ಚಿಕನ್ ವಿಂಡಾಲೂ ರೆಡಿ

ವೆಬ್ದುನಿಯಾವನ್ನು ಓದಿ