800 ಗ್ರಾಂ ಏಲುಬು ರಹಿತ ಚಿಕ್ಕನ್ 2-3 ಚಮಚ ಲಿಂಬೆ ರಸ ಸ್ವಲ್ಪ ಬಣ್ಣ ಸ್ವಲ್ಪ ಮೊಸರು 300 ಗ್ರಾಂ/ ಶ್ರೀಖಂಡ 2 ಚಮಚ ಗಾರಲಿಕ್ ಪೇಸ್ಟ್ ಶುಂಠಿ, ಗರಂ ಮಾಸಾಲಾ ಪುಡಿ, ಜಿರಿಗೆ 1/2 ಚಮಚ ಮತ್ತು ಸ್ವಲ್ಪ ಬೆಣ್ಣೆ. ಆಗತ್ಯಕ್ಕೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ :
ಚಿಕ್ಕನ್ ಸಣ್ಣಗೆ ಕತ್ತರಿಸಿ ಚನ್ನಾಗಿ ತೊಳೆದುಕೊಳ್ಳಿ ಮತ್ತು ಅದಕ್ಕೆ ಲಿಂಬೆ ರಸವನ್ನು ಚನ್ನಾಗಿ ಹಚ್ಚಿಕೊಳ್ಳಿ. ಮೇಲೆ ಹೇಳಿದ ಎಲ್ಲ ವಸ್ತುಗಳಲ್ಲಿ ಚಿಕ್ಕನ್ ತುಂಡುಗಳನ್ನು ಸೇರಿಸಿಕೊಳ್ಳಿ ಮತ್ತು ಅದನ್ನು 3-4 ಗಂಟೆಗಳ ಕಾಲ ಹಾಗೆ ಬಿಡಿ. ಬೆಣ್ಣೆಯನ್ನು ಹೊರತುಪಡಿಸಿ. ಇದನ್ನು ಫ್ರಿಜ್ನ್ನಲ್ಲಿ ಇಡಿ. ಮಸಾಲೆಯಲ್ಲಿ ಹಾಕಿದ ಚಿಕ್ಕನ್ ತುಂಡುಗಳನ್ನು ಚೆನ್ನಾಗಿ ತಿರುಗಿಸಿ, ನಂತರ ಸ್ವಲ್ಪ ಕಂದು ಬಣ್ಣ ಬರುವವರೆಗೂ ಕಾಯಿಸಿರಿ ನಂತರ ಬೆಣ್ಣೆಯಲ್ಲಿ ಅದ್ದಿ ಮತ್ತೆ ಕಾಯಿಸಿರಿ. ನಂತರ ಇದನ್ನು ಚಾಟ್ ಮಸಲಾದೊಂದಿಗೆ ರುಚಿ ನೋಡಬಹುದು.