ಶುಚಿಮಾಡಿದ ಚಿಕನ್ - 300 ಗ್ರಾಂ ಉಪ್ಪು - ರುಚಿಗೆ ತಕ್ಕಷ್ಟು ಗೋಡಂಬಿ ಮತ್ತು ಬಾದಾಮಿ ಪೇಸ್ಟ್- ಸ್ವಲ್ಪ ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ - 2 ಚಮಚ ಈರುಳ್ಳಿ - 1 ಅರಶಿನ ಪುಡಿ - ಕಾಲು ಚಮಚ ಮೆಣಸಿನ ಹುಡಿ - ಎರಡು ಚಮಚ ಧನಿಯ ಪುಡಿ - 1 ಚಮಚ ಕೇಸರಿ ಬಣ್ಣ - 1 ಚಮಚ ಬೆಣ್ಣೆ - 3 ಚಮಚ ಎಣ್ಣೆ - 1 ಚಮಚ
ಪಾಕ ವಿಧಾನ:
ಮೊದಲಿಗೆ ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ನೀರುಳ್ಳಿಯನ್ನು ಕೆಂಪಗೆ ಹುರಿಯಿರಿ. ಇದಕ್ಕೆ ಬೆಳ್ಳುಳ್ಳಿ ಮತ್ತು ಶುಂಠಿ ಪೇಸ್ಟ್ ಹಾಗೂ ನೀರು ಹಾಕಿ ಚೆನ್ನಾಗಿ ಕದಡಿಸುತ್ತಾ ಇರಿ. ಅರಶಿನ ಹುಡಿ, ಮೆಣಿಸಿನ ಹುಡಿ, ಧನಿಯಾ ಹುಡಿ ಮತ್ತು ಉಪ್ಪು ಹಾಕಿ ಚೆನ್ನಾಗಿ ಮಿಶ್ರಮಾಡಿ. ಇದು ಬೇಯಲು ಪ್ರಾರಂಭವಾದಾಗ.ಇದಕ್ಕೆ ಕೇಸರಿ ಮತ್ತು ತುಂಡಿಮಾಡಿಟ್ಟುಕೊಂಡಿರುವ ಚಿಕನ್ ಸೇರಿಸಿ. ಇದಕ್ಕೆ ಬೇಕಾದಷ್ಟು ನೀರು ಸೇರಿಸಿ ದಪ್ಪವಾಗುವವರೆಗೆ ಬೇಯಿಸಿ ಕೊನೆಯಲ್ಲಿ ಬೆಣ್ಣೆಯನ್ನು ಹಾಕಿ. ಇದು ಚಪಾತಿ, ಪರೋಟ ತಿನ್ನಲು ರುಚಿಯಾಗಿರುತ್ತದೆ.