ಪಾಕ ವಿಧಾನ ಮೊದಲು ಪನ್ನೀರ್ ಘನಗಳನ್ನು ಎಣ್ಣೆಯಲ್ಲಿ ಹಗುರವಾಗಿ ಹುರಿದಿಟ್ಟುಕೊಳ್ಳಿ. ಪಾತ್ರೆಯಲ್ಲಿ ಎಣ್ಣೆಯನ್ನು ಕಾಯಿಸಿ, ಹೆಚ್ಚಿದ ಈರುಳ್ಳಿ ಹೋಳುಗಳನ್ನು 3 ನಿಮಿಷ ಹುರಿಯಿರಿ. ಇದಕ್ಕೆ ಬೆಳ್ಳುಳ್ಳಿ ಶುಂಠಿ ಪೇಸ್ಟ್ ಸೇರಿಸಿ 2 ನಿಮಿಷ ಹುರಿಯಿರಿ. ತದನಂತರ ಮೆಣಸಿನ ಪುಡಿ, ಅರಶಿನ,ಜೀರಿಗೆ ಪುಡಿ ಸೇರಿಸಿ ಕಲಕಿರಿ, ಎರಡು ನಿಮಿಷಗಳ ಕಾಲ ಸಣ್ಣ ಬೆಂಕಿಯಲ್ಲಿ ಹುರಿಯಿರಿ. ಟೊಮೇಟೋ ಪೂರಿ ಸೇರಿಸಿ ಚೆನ್ನಾಗಿ ಕಲಕಿ.
ಬಟಾಣಿಯನ್ನು ತೆಗೆದಿರಿಸಿದಂತಹ ನೀರಲ್ಲಿ ಉಪ್ಪು ಸೇರಿಸಿ ಚೆನ್ನಾಗಿ ಬೇಯಿಸಿ. ಇದಕ್ಕೆ 2 ಚಮಚ ಗೋಡಂಬಿ, 4 ತೆಂಗಿನಕಾಯಿ ಚೂರು, 2 ಟೇಬಲ್ ಚಮಚ ಗಸಗಸೆ ಚೆನ್ನಾಗಿ ಅರೆದು ಪೇಸ್ಟ್ ಮಾಡಿದ್ದನ್ನು ಸೇರಿಸಿ.
ಪನೀರ್, ಮೊಟ್ಟೆಗಳು, ಕೆನೆಮೊಸರು ಮತ್ತು ಗರಂ ಮಸಾಲಪುಡು ಸೇರಿಸಿ 3 ನಿಮಿಷಗಳ ಕಾಲ ಕುದಿಯಲು ಬಿಡಿ. ಇದನ್ನು ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ರೊಟ್ಟಿಗಳೊಂದಿಗೆ ಸವಿಯಲು ಕೊಡಿ.