ಪಾಕ ವಿಧಾನ: ಒಂದು ಪಾತ್ರೆಯಲ್ಲಿ 2 ಚಮಚ ಎಣ್ಣೆ ಹಾಕಿ ಕಾಯಿಸಿ ಇದಕ್ಕೆ ಬೇಯಿಸಿದ ಕೋಳಿ ಮಾಂಸದ ತುಂಡುಗಳನ್ನು ಸೇರಿಸಿ. ಇದಕ್ಕೆ ಮೆಣಸಿನ ಪುಡಿ, ಸೋಯಾಸಾಸ್, ಬೆಳ್ಳುಳ್ಳಿ ಶುಂಠಿ ಪೇಸ್ಟ್ ಸೇರಿಸಿ 5 ನಿಮಿಷ ಹುರಿಯಿರಿ. ಚಿಕನ್ ಕಂದುಬಣ್ಣಕ್ಕೆ ಬಂದಾಗ ಅಣಬೆಗಳು ಸೇರಿಸಿ ಉಪ್ಪು ಹಾಕಿ ಅಣಬೆಗಳು ಬೇಯುವವರೆಗೆ ಬೇಯಿಸಿ. ನಂತರ ಕೊಚ್ಚಿದ ಈರುಳ್ಳಿ ಮೊಳಕೆಗಳಿಂದ ಅಲಂಕರಿಸಿ. ಅನ್ನದೊಂದಿಗೆ ಮೇಲಡಿಗೆಯಾಗಿ ಬಡಿಸಿ.