ಗುಡ್ಡಗಾಡು ಬೈಕ್ ರೇಸ್-ಸ್ಪಿಟ್ಜ್‌ಗೆ ಬಂಗಾರ

ಶನಿವಾರ, 23 ಆಗಸ್ಟ್ 2008 (20:53 IST)
ಒಲಿಂಪಿಕ್ ಮಹಿಳಾ ಗುಡ್ಡಗಾಡು ಬೈಕ್ ರೇಸ್ ಸ್ಪರ್ಧೆಯಲ್ಲಿ ಜರ್ಮನಿಯ ಸಬಿನೆ ಸ್ಪಿಟ್ಜ್ ಚಿನ್ನದ ಪದಕ ಜಯಿಸಿದ್ದು,4 ವರ್ಷಗಳ ಹಿಂದೆ ಅವರು ಅಥೇನ್ಸ್‌ನಲ್ಲಿ ಕಂಚಿನ ಪದಕಕ್ಕೆ ತೃಪ್ತಿ ಪಟ್ಟುಕೊಂಡಿದ್ದರು.

ಸುಮಾರು 2.75 ಮೈಲು ಪಥದ 6 ಸುತ್ತುಗಳನ್ನು ಸ್ಪಿಟ್ಜ್ ಒಂದು ತಾಸು 45 ನಿಮಿಷ, 11 ಸೆಕೆಂಡುಗಳಲ್ಲಿ ಮುಗಿಸಿದರು. ಅವರು ಅಂತಿಮ ರೇಖೆಯಿಂದ 5 ಮೀಟರ್ ದೂರದಲ್ಲಿ ತಡೆದು, ತಮ್ಮ ಬೈಕನ್ನು ಹಾರಿಸುತ್ತಾ ಅಂತಿಮ ರೇಖೆಯನ್ನು ದಾಟಿದರು.

ಪೊಲ್ಯಾಂಡಿನ ಮಾಜಾ ವ್ಲೊಸ್ಜೆಜೊವ್ಸ್‌ಕ ಸ್ಪಿಟ್ಜ್‌ಗಿಂತ 41 ಸೆಕೆಂಡುಗಳಷ್ಟು ಹಿಂದೆ ಬಿದ್ದು, ಬೆಳ್ಳಿ ಪದಕಕ್ಕೆ ಪಾತ್ರರಾದರು. ರಷ್ಯಾದ ಇರಿನಾ ಕಲೆಂನ್ಟೀವಾ ಕಂಚಿನ ಪದಕಕ್ಕೆ ತೃಪ್ತಿ ಪಟ್ಟುಕೊಂಡರು.

ಮೊದಲ ಸುತ್ತಿನ ಬಳಿಕ ಸ್ಪಿಟ್ಜ್ 21 ಸೆಕೆಂಡುಗಳಷ್ಟು ಮುನ್ನಡೆ ಪಡೆದಿದ್ದರು, ಎರಡನೇ ಸುತ್ತಿನ ನಂತರ 49 ಸೆಕೆಂಡುಗಳಷ್ಟು ಮುನ್ನಡೆ ಪಡೆದು ಎದುರಾಳಿಗಳಿಂದ ಯಾವುದೇ ಭೀತಿಯನ್ನು ಎದುರಿಸಲಿಲ್ಲ.

ಹಾಲಿ ಚಿನ್ನ ಪದಕದಾರಿ ನಾರ್ವೆಯ ಗುನ್ನ್ ರಿಟ ದಾಹ್ಲೆ ಪ್ಲೆಸ್ಜಾ ಕೇವಲ ಮೂರು ಸುತ್ತನ್ನು ಪೂರ್ಣಗೊಳಿಸುವಷ್ಟರಲ್ಲಿ ತಾಂತ್ರಿಕ ಸಮಸ್ಯೆಗಳ ಕಾರಣ ಹೇಳಿ ಸ್ಪರ್ಧೆಯಿಂದ ಹೊರ ನಡೆದರು.

ವೆಬ್ದುನಿಯಾವನ್ನು ಓದಿ