ಹಾಲುಬಾಯಿ ನೋಡಿ ಬಾಯಿ ಬಾಯಿ ಬಿಟ್ಟುಕೊಳ್ಳಬೇಡಿ, ಮಾಡಿ ಸವಿಯಿರಿ

ಸೋಮವಾರ, 30 ಜನವರಿ 2017 (12:18 IST)
ಬೆಂಗಳೂರು:  ಹಾಲುಬಾಯಿ ಹಳ್ಳಿ ಕಡೆ ಅದರಲ್ಲೂ ವಿಶೇಷವಾಗಿ ಕರಾವಳಿ ಕಡೆ ಸಿಗುವ ಹಳೇ ತಿಂಡಿ.  ಥೇಟ್ ಹಲ್ವಾದಂತೇ ಮಾಡುವ ಈ ತಿಂಡಿ ಆರೋಗ್ಯಕರ ಮತ್ತು ರುಚಿಕರ.

ಬೇಕಾಗುವ ಸಾಮಗ್ರಿಗಳು

ಬೆಳ್ತಿಗೆ ಅಕ್ಕಿ
ಕಾಯಿ ಹಾಲು
ಬೆಲ್ಲ

ಮಾಡುವ ವಿಧಾನ

ಬೆಳ್ತಿಗೆ ಅಕ್ಕಿಯನ್ನು ನೆನೆ ಹಾಕಿ ನೀರು ದೋಸೆಯ ಹಿಟ್ಟಿನಷ್ಟು ತೆಳುವಾಗಿ ನುಣ್ಣಗೆ ರುಬ್ಬಿಕೊಳ್ಳಿ. ಈ ಹಿಟ್ಟನ್ನು ಬೆಲ್ಲ, ಕಾಯಿ ಹಾಲಿನ ಜತೆಗೆ ಚೆನ್ನಾಗಿ ತಿರುವಿ. ಇದು ಹಲ್ವಾ ಹಿಟ್ಟಿನ ಹದಕ್ಕೆ ಬರುವಾಗ ತಳ ಬಿಟ್ಟು ಬರುವುದು. ನಂತರ ತುಪ್ಪ ಅಥವಾ ಕೊಬ್ಬರಿ ಎಣ್ಣೆ ಸವರಿದ ಬಟ್ಟಲಿಗೆ ಸುರುವಿಕೊಂಡು ಹಲ್ವಾದಂತೆ ಬೇಕಾದ ಆಕಾರಕ್ಕೆ ಕತ್ತರಿಸಿಕೊಳ್ಳಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ