ರುಚಿ ರುಚಿಯಾದ ಕ್ಯಾರೆಟ್ ಚಟ್ನಿ ಮಾಡುವುದು ಹೇಗೆ ಗೊತ್ತಾ?

ಶುಕ್ರವಾರ, 22 ನವೆಂಬರ್ 2019 (10:03 IST)
ಬೆಂಗಳೂರು :ಕ್ಯಾರೆಟ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಿಂದ ಸಾಂಬಾರು,ಪಲ್ಯ ಮಾಡುವುದರ ಜೊತೆಗೆ ಇದರಿಂದ ಚಟ್ನಿ ಕೂಡ ತಯಾರಿಸಬಹುದು. ಇದನ್ನ ಊಟಕ್ಕೆ ಅಥವಾ ಇಡ್ಲಿ, ದೋಸೆಯ ಜೊತೆಗೆ ತಿನ್ನಬಹುದು.



ಬೇಕಾಗಿರುವ ಸಾಮಾಗ್ರಿಗಳು:
ಸಣ್ಣದಾಗಿ ತುರಿದ ಕ್ಯಾರೆಟ್ 1 ಕಪ್, ಟೊಮೆಟೊ 1, ಈರುಳ್ಳಿ 1, ಜೀರಿಗೆ ½ ಚಮಚ, ಕಡಲೆಬೇಳೆ 4 ಚಮಚ, ಹುಣಸೆ ಹಣ್ಣು ಸ್ವಲ್ಪ, ಬೆಳ್ಳುಳ್ಳಿ 5 ರಿಂದ 6 ಎಸಳು, ಶುಂಠಿ 1 ಇಂಚು, ಕೆಂಪು ಮೆಣಸಿನಕಾಯಿ 8 ರಿಂದ 10, ಕರಿಬೇವು ಸ್ವಲ್ಪ, ಕೊತ್ತಂಬರಿ ಸೊಪ್ಪು ಸ್ವಲ್ಪ, ಉಪ್ಪು.


ಮಾಡುವ ವಿಧಾನ:
ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಜೀರಿಗೆ, ಕಡಲೆಬೇಳೆ, ಬೆಳ್ಳುಳ್ಳಿ ಮತ್ತು ಈರುಳ್ಳಿ ಹಾಕಿ ಹುರಿದುಕೊಳ್ಳಿ. ಬಳಿಕ ಅದಕ್ಕೆ  ಕೆಂಪು ಮೆಣಸಿನಕಾಯಿ, ಕ್ಯಾರೆಟ್, ಟೊಮೆಟೊ ಹಾಕಿ ಹುರಿಯಿರಿ. ಕ್ಯಾರೆಟ್, ಟೊಮೆಟೊ ಬೆಂದ ನಂತರ ಅದನ್ನು ತಣ್ಣಗಾಗಲು ಬಿಡಿ. ನಂತರ ಮಿಕ್ಸಿಗೆ ಹುಣಸೆ ಹಣ್ಣು, ಉಪ್ಪು, ಮತ್ತು ಬೆಂದ ಕ್ಯಾರೆಟ್, ಟೊಮೆಟೊ ಮಿಶ್ರಣವನ್ನು ಹಾಕಿ ರುಬ್ಬಿ.


ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ ಬಿಸಿ ಮಾಡಿ ಸಾಸಿವೆ, ಉದ್ದಿನಬೇಳೆ, ಇಂಗು, ಮತ್ತು ಕರಿಬೇವು ಹಾಕಿ ಒಗ್ಗರಣೆ ಹಾಕಿ ಅದಕ್ಕೆ ಈ ರುಬ್ಬಿದ ಮಿಶ್ರಣವನ್ನು ಸೇರಿಸಿ, ಕೊತ್ತಂಬರಿ ಸೊಪ್ಪು ಮಿಕ್ಸ್ ಮಾಡಿ.



 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ