ರುಚಿಕರ ಮಸಾಲಾ ಪಡ್ಡು ಮಾಡುವುದು ಹೇಗೆ ಗೊತ್ತಾ?

ಸೋಮವಾರ, 8 ಅಕ್ಟೋಬರ್ 2018 (14:10 IST)
ಬೇಕಾಗುವ ಸಾಮಗ್ರಿಗಳು: 
 
ಅಕ್ಕಿ – 2 1/2 ಕಪ್
ಉದ್ದಿನಬೇಳೆ – 1/2 ಕಪ್
ಮೆಂತೆ – 2 ಚಮಚ
ಕಡಲೇಬೇಳೆ – 2 ಚಮಚ
ತೊಗರಿಬೇಳೆ – 1 ಚಮಚ
ಈರುಳ್ಳಿ – 2
ಕರಿಬೇವಿನ ಸೊಪ್ಪು – 2 ಎಸಳು
ಹಸಿಮೆಣಸು- 2-3
ಎಣ್ಣೆ – ಸ್ವಲ್ಪ
ಕೊತ್ತಂಬರಿಸೊಪ್ಪು – ಸ್ವಲ್ಪ
ಉಪ್ಪು – ರುಚಿಗೆ ತಕ್ಕಷ್ಟು
ಟೊಮೇಟೋ - 1
 
ಮಾಡುವ ವಿಧಾನ: 
 
* ಅಕ್ಕಿ, ಮೆಂತೆ, ಉದ್ದಿನಬೇಳೆ,  ಕಡಲೇಬೇಳೆ ಮತ್ತು ತೊಗರಿಬೇಳೆಯನ್ನು ಒಟ್ಟಿಗೆ ನೆನೆಸಿ. ಚೆನ್ನಾಗಿ ನೆನೆದ ನಂತರ ನುಣ್ಣಗೆ ರುಬ್ಬಿ ರುಚಿಗೆ ಬೇಕಾದಷ್ಟು ಉಪ್ಪನ್ನು ಹಾಕಿ ರಾತ್ರಿಯಿಡೀ ಹಾಗೇ ಇರಿಸಿ
* ಪಡ್ಡು ಮಾಡುವ ಕಾವಲಿಗೆ ಸ್ವಲ್ಪ ಎಣ್ಣೆ ಸವರಿ ಬಿಸಿ ಮಾಡಿ
* ನಂತರ ಈರುಳ್ಳಿ, ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು, ಹಸಿಮೆಣಸಿನ ಕಾಯಿ ಮತ್ತು ಟೊಮೇಟೋವನ್ನು ಹೆಚ್ಚಿಟ್ಟುಕೊಳ್ಳಿ. 
* ಈಗ ಬಿಸಿ ಮಾಡಿದ ಕಾವಲಿಗೆಯಲ್ಲಿ ಒಂದೊಂದೇ ಗುಂಡಿಯೊಳಗೆ ಹಿಟ್ಟನ್ನು ಹೊಯ್ಯರಿ
* ನಂತರ ಹೆಚ್ಚಿಟ್ಟಿರುವ ತರಕಾರಿಗಳನ್ನು ಮೇಲಿನಿಂದ ಉದುರಿಸಿ ಮುಚ್ಚಳದಿಂದ ಮುಚ್ಚಿಟ್ಟು ಚೆನ್ನಾಗಿ ಬೇಯಿಸಿ.
* ಟೊಮೇಟೋ ಚಟ್ನಿ ಅಥವಾ ತೆಂಗಿನಕಾಯಿ ಚಟ್ನಿ ಜೊತೆ ಬಿಸಿ ಬಿಸಿ ಪಡ್ಡು ಸವಿಯಲು ಸಿದ್ಧ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ