ಬೆಂಗಳೂರು : ಮೊಟ್ಟೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಕೆಲವರು ಮೊಟ್ಟೆ ತಿನ್ನಲು ಇಷ್ಟಪಡುವುದಿಲ್ಲ. ಅಂತವರು ಎಗ್ ರೈಸ್ ತಯಾರಿಸಿ ತಿನ್ನಿ.
ಬೇಕಾಗುವ ಸಾಮಾಗ್ರಿಗಳು : ಮೊಟ್ಟೆ 2-3, ಅನ್ನ 1 ಕಪ್, ಈರುಳ್ಳಿ 1, ಹಸಿಮೆಣಸಿನ ಕಾಯಿ 5-6, ಶುಂಠಿ-ಬೆಳ್ಳುಳ್ಳಿ ಪೇಸ್ಟ್ 1 ಚಮಚ, ಗರಂ ಮಸಾಲ 1 ½ ಚಮಚ, ಕಡ್ಲೆಬೇಳೆ 1 ಚಮಚ, ನಿಂಬೆ ಹಣ್ಣು ½ ಹೋಳು, ಕೊತ್ತಂಬರಿ ಸೊಪ್ಪು ಸ್ವಲ್ಪ, ಅರಶಿನ ಪುಡಿ 1 ಚಿಟಿಕೆ, ಜೀರಿಗೆ ಸಾಸಿವೆ ½ ಚಮಚ, ಉಪ್ಪು, ಎಣ್ಣೆ 4 ಚಮಚ.
ಮಾಡುವ ವಿಧಾನ : ಮೊದಲಿಗೆ ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಜೀರಿಗೆ ಸಾಸಿವೆ ಕಡ್ಲೆಬೇಳೆ ಹಾಕಿ. ಬಳಿಕ ಅದಕ್ಕೆ ಈರುಳ್ಳಿ, ಹಸಿಮೆಣಸಿನ ಕಾಯಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಅರಶಿನ ಸೇರಿಸಿ ಫ್ರೈ ಮಾಡಿ. ನಂತರ ಅದಕ್ಕೆ ಮೊಟ್ಟೆ ಹಾಕಿ 2 ನಿಮಿಷ ಫ್ರೈ ಮಾಡಿ ಬಳಿಕ ಅದಕ್ಕೆ ಅನ್ನ, ಗರಂ ಮಸಾಲ, ಉಪ್ಪು, ಕೊತ್ತಂಬರಿ ಸೊಪ್ಪು, ಸೇರಿಸಿ ಮಿಕ್ಸ್ ಮಾಡಿ ನಂತರ ಗ್ಯಾಸ್ ಆಫ್ ಬಳಿಕ ನಿಂಬೆ ರಸ ಹಾಕಿ ಮಿಕ್ಸ್ ಮಾಡಿದರೆ ಎಗ್ ರೈಸ್ ರೆಡಿ.