ಬೆಂಗಳೂರು : ಬೇಸಿಗೆಯಲ್ಲಿ ತುಂಬಾ ಸೆಕೆ ಇರುವುದರಿಂದ ದೇಹ ತುಂಪಾಗಿಡುವುದು ತುಂಬಾ ಉತ್ತಮ. ಆದ್ದರಿಂದ ಬೇಸಿಗೆಯಲ್ಲಿ ಪನ್ನೀರ್ ಮೊಸರು ಸಾರು ತಯಾರಿಸಿ ತಿನ್ನಿ, ಇದು ದೇಹವನ್ನು ತಂಪಾಗಿಡುತ್ತದೆ.
ಬೇಕಾಗುವ ಸಾಮಾಗ್ರಿಗಳು:
ಪನ್ನೀರ್ 200 ಗ್ರಾಂ, ಹಸಿ ಬಟಾಣಿ ½ ಕಪ್, ಜೀರಿಗೆ ½ ಚಮಚ, ಸಾಸಿವೆ ಸ್ವಲ್ಪ, ಇಂಗು, ಹಸಿ ಮೆಣಸಿನಕಾಯಿ 2, ಖಾರದ ಪುಡಿ ಸ್ವಲ್ಪ, ½ ಚಮಚ ಅರಶಿನ, ಸ್ವಲ್ಪ ಕೊತ್ತಂಬರಿ ಸೊಪ್ಪು, ರುಚಿಗೆ ತಕಷ್ಟು ಉಪ್ಪು, ಎಣ್ಣೆ.
ತಯಾರಿಸುವ ವಿಧಾನ:
ಒಂದು ಪಾತ್ರೆಯಲ್ಲಿ 2 ಚಮಚ ಎಣ್ಣೆ ಹಾಕಿ ಬಿಸಿ ಮಾಡಿ ಅದಕ್ಕೆ ಸಾಸಿವೆ, ಜೀರಿಗೆ, ಇಂಗು , ಕತ್ತರಿಸಿದ ಹಸಿಮೆಣಸಿನಕಾಯಿ ಹಾಕಿ ಚೆನ್ನಗಿ ಹುರಿಯಿರಿ. ಬಳಿಕ ಪನ್ನೀರ್ ತುಂಡುಗಳನ್ನು ಹಾಕಿ ಅದು ಕಂದು ಬಣ್ಣ ಬರುವವರೆಗೂ ಹುರಿಯಿರಿ. ಬಳಿಕ ನೆನೆಸಿಟ್ಟ ಹಸಿ ಬಟಾಣಿಯನ್ನು ಹಾಕಿ ಪ್ರೈ ಮಾಡಿ. ಅದಕ್ಕೆ ಅರಶಿನ, ಖಾರದ ಪುಡಿ, ಮೊಸರು, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಚೆನ್ನಾಗಿ ಕುದಿಸಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿದರೆ ಪನ್ನೀರ್ ಮೊಸರು ಸಾರು ರೆಡಿ.