ಸಂಜೆಗೆ ಸವಿಯಿರಿ ಬಿಸಿ ಬಿಸಿ ಬಟಾಟೆ ಬಜ್ಜಿ

ಶುಕ್ರವಾರ, 15 ಡಿಸೆಂಬರ್ 2017 (08:40 IST)
ಬೆಂಗಳೂರು: ಸಂಜೆಯ ಹೊತ್ತಿಗೆ ಎಲ್ಲರಿಗೂ ಏನಾದರು ತಿನ್ನಬೇಕು ಅಂತ ಅನಿಸುತ್ತದೆ. ಸಂಜೆಯ ಟೀ ಜೊತೆಗೆ ಏನಾದರು ತಿಂಡಿ ಇದ್ದರೆ ತುಂಬಾ ಚೆನ್ನಾಗಿರುತ್ತದೆ. ಬಟಾಟೆ ಬಜ್ಜಿಯನ್ನು ಯಾಗಾಗ ಬೇಕಾದರು ಮಾಡಿ ತಿನ್ನಬಹುದು. ತುಂಬಾ ಸುಲಭವಾಗಿ ಬೇಗ ರೆಡಿಯಾಗುವಂತದು.

ಬೇಕಾಗಿರುವ ಸಾಮಾಗ್ರಿಗಳು:
1 ಕಪ್ ಕಡಲೆಹಿಟ್ಟು, ಉಪ್ಪು, ಕರಿಬೇವು ಸ್ವಲ್ಪ,  ಕೊತ್ತಂಬರಿ ಸೊಪ್ಪು ಸ್ವಲ್ಪ, ಅಚ್ಚಖಾರದ ಪುಡಿ, ಓಂಕಾಳು, ಅಡುಗೆ ಸೋಡಾ, ಎಣ್ಣೆ, ಬಟಾಟೆ (ರೌಂಡ್ ಆಗಿ ಕಟ್ ಮಾಡಿ ).


ಮಾಡುವ ವಿಧಾನ:
ಒಂದು ಪಾತ್ರೆಯಲ್ಲಿ ಕಡಲೆಹಿಟ್ಟು, 1ಚಿಟಿಕೆ ಅಡುಗೆ ಸೋಡಾ, ಸ್ವಲ್ಪ ಅಚ್ಚಖಾರದ ಪುಡಿ, ಸ್ವಲ್ಪ ಕೊತ್ತಂಬರಿ ಸೊಪ್ಪು, ಕರಿಬೇವು, ರುಚಿಗೆ ತಕಷ್ಟು ಉಪ್ಪು, ಸ್ವಲ್ಪ ಓಂಕಾಳು ಹಾಕಿ ಸ್ವಲ್ಪ ನೀರು ಹಾಕಿ ಹಿಟ್ಟನ್ನು ಗಟ್ಟಿಯಾಗಿ ಕಲಸಬೇಕು.
ಆಮೇಲೆ ಬಾಣಲೆಯಲ್ಲಿ ಕರಿಯಲು ಬೇಕಾಗುವಷ್ಟು ಎಣ್ಣೆ ಹಾಕಿ ಬಿಸಿ ಮಾಡಿ ಅದು ಬಿಸಿಯಾದ ಮೇಲೆ ಬಟಾಟೆ ಪೀಸ್ ನ್ನು ಹಿಟ್ಟಿನಲ್ಲಿ ಅದ್ದಿ, ಎಣ್ಣೆಗೆ ಬಿಡಿ. ಬಟಾಟೆ ಪೀಸ್ ನ್ನು ಎರಡು ಕಡೆ ತಿರುಗಿಸಿ ಹಾಕಿ ಪ್ರೈ ಮಾಡಿ. ಅದು ಕಂದು ಬಣ್ಣ ಬಂದಾಗ ತೆಗೆಯಿರಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ