ಬಾಳೆಕಾಯಿ ಹಪ್ಪಳ ಮಾಡುವುದು ಹೇಗೆ ಗೊತ್ತಾ?

ಮಂಗಳವಾರ, 28 ಏಪ್ರಿಲ್ 2020 (09:45 IST)
ಬೆಂಗಳೂರು: ಲಾಕ್ ಡೌನ್ ವೇಳೆ ಮನೆಯಲ್ಲೇ ಕೂತು ಬೋರಾಗಿದ್ದರೆ ಹೊಸ ಅಡುಗೆ ಪ್ರಯೋಗ ಮಾಡುತ್ತಿರಿ. ಹೇಗಿದ್ದರೂ ಬೇಸಿಗೆ. ಹಪ್ಪಳ ಮಾಡಲು ಸೂಕ್ತ ಸಮಯ. ಮನೆಯಲ್ಲೇ ಇದ್ದುಕೊಂಡು ಬಾಳೆಕಾಯಿ ಹಪ್ಪಳ ಮಾಡುವುದು ಹೇಗೆ ತಿಳಿಯಬೇಕೇ? ಹಾಗಿದ್ದರೆ ಇಲ್ಲಿ ನೋಡಿ.


ಬಾಳೆಕಾಯಿಯನ್ನು ಸಿಪ್ಪೆ ಸಮೇತ ಬೇಯಿಸಿಕೊಂಡು ಬಳಿಕ ಸಿಪ್ಪೆ ತೆಗೆಯಿರಿ. ಇದಕ್ಕೆ ಉಪ್ಪು, ಮೆಣಸು, ಧನಿಯಾ ಬೇಕಿದ್ದರೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಬೇಕಿದ್ದರೆ ಬೆಳ್ಳುಳ್ಳಿ, ಎಳ್ಳು ಅಥವಾ ಜೀರಿಗೆಯನ್ನೂ ಹಾಕಬಹುದು. ಕೈಗೆ ಎಣ್ಣೆ ಹಚ್ಚಿಕೊಂಡು ಉಂಡೆ ಕಟ್ಟಿ, ಹಪ್ಪಳ ಒತ್ತಿಕೊಂಡು ಮೂರರಿಂದ ನಾಲ್ಕು ಬಿಸಿಲಿಗೆ ಒಣಗಲು ಬಿಡಿ. ಬಳಿಕ ಎಣ್ಣೆಗೆ ಹಾಕಿ ಕರಿದು ನೋಡಿ!

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ