ಆಲೂ ಸ್ಯಾಂಡ್‌ವಿಚ್ ಮಾಡಿ ಸವಿಯಿರಿ..

ಗುರುವಾರ, 21 ಮಾರ್ಚ್ 2019 (20:07 IST)
ಮುಂಜಾನೆಯ ತಿಂಡಿಗೆ ಅಥವಾ ಸಾಯಂಕಾಲದ ತಿಂಡಿಗೆ ನೀವು ಸುಲಭವಾಗಿ ಮಾಡಿಕೊಳ್ಳಬಹುದಾದ ತಿಂಡಿ ಇದಾಗಿದೆ. ಹಲವು ರೀತಿಯ ಸ್ಯಾಂಡ್‌ವಿಚ್‌ಗಳನ್ನು ನೀವು ಮನೆಯಲ್ಲೇ ಮಾಡಿಕೊಳ್ಳಬಹುದಾಗಿದ್ದು ಅದು ಮಕ್ಕಳಿಗೂ ಪ್ರಿಯವಾದ ತಿಂಡಿಯಾಗಿದೆ. ಆಲೂ ಸ್ಯಾಂಡ್‌ವಿಚ್ ಅನ್ನು ನೀವು ಸುಲಭವಾಗಿ ಮನೆಯಲ್ಲೇ ಮಾಡಿಕೊಳ್ಳಬಹುದಾಗಿದೆ.
ಬೇಕಾಗುವ ಸಾಮಗ್ರಿಗಳು:
ಬ್ರೆಡ್ ಸ್ಲೈಸ್ - 8-10
ಆಲೂಗಡ್ಡೆ - 2
ಈರುಳ್ಳಿ - 1
ಕ್ಯಾಪ್ಸಿಕಂ - 1
ಟೊಮ್ಯಾಟೋ - 1/2
ಬೆಳ್ಳುಳ್ಳಿ - 6-7 ಎಸಳು
ಎಣ್ಣೆ- ಸ್ವಲ್ಪ
ಟೊಮ್ಯಟೋ ಕೆಚಪ್ - ಸ್ವಲ್ಪ
ಕೊತ್ತಂಬರಿ ಸೊಪ್ಪು - ಸ್ವಲ್ಪ
ಚೀಸ್ - ಸ್ವಲ್ಪ
ಬೆಣ್ಣೆ - ಸ್ವಲ್ಪ
 
ಮಾಡುವ ವಿಧಾನ:
ಒಂದು ಪ್ಯಾನ್‌ನಲ್ಲಿ 2 ಚಮಚ ಎಣ್ಣೆಯನ್ನು ಹಾಕಿ ಬಿಸಿಯಾದ ನಂತರ ಹೆಚ್ಚಿದ ಈರುಳ್ಳಿ, ಕ್ಯಾಪ್ಸಿಕಮ್, ಟೊಮ್ಯಾಟೋ ಚಿಟಿಕೆ ಉಪ್ಪು ಮತ್ತು ಬೆಳ್ಳುಳ್ಳಿಯನ್ನು ಹಾಕಿ ಹುರಿಯಿರಿ. ಸ್ವಲ್ಪ ಬೆಂದ ನಂತರ ಈಗಾಗಲೇ ಬೇಯಿಸಿ ಸ್ಮ್ಯಾಶ್ ಮಾಡಿಟ್ಟಿರುವ ಆಲೂಗಡ್ಡೆಯನ್ನು ಅದಕ್ಕೆ ಹಾಕಿ 1-2 ಚಮಚ ಕೆಚಪ್ ಅನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಹಾಗೂ ಸ್ಟೌ ಆಫ್ ಮಾಡಿ. ನಂತರ ಈ ಮಿಶ್ರಣಕ್ಕೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಸೇರಿಸಿ.
 
ಒಂದು ಬ್ರೆಡ್ ಸ್ಲೈಸ್ ಅನ್ನು ತೆಗೆದುಕೊಂಡು ಈಗಾಗಲೇ ಮಾಡಿಟ್ಟಿರುವ ಮಿಶ್ರಣವನ್ನು ಅದರ ಮೇಲೆ ಹರಡಿ. ಅದರ ಮೇಲೆ ಸ್ವಲ್ಪ ತುರಿದ ಚೀಸ್ ಅನ್ನು ಹರಡಿ ಇನ್ನೊಂದು ಬ್ರೆಡ್ ಸ್ಲೈಸ್‌ನಿಂದ ಮುಚ್ಚಿ. ನಂತರ ಬ್ರೆಡ್ ಸ್ಲೈಸ್‌ಗಳ ಹೊರ ಭಾಗಕ್ಕೆ ಬೆಣ್ಣೆಯನ್ನು ಸವರಿ ಕಾದ ತವಾದ ಮೇಲೆ ಫ್ರೈ ಮಾಡಿದರೆ ರುಚಿಯಾದ ಆಲೂ ಸ್ಯಾಂಡ್‌ವಿಚ್ ಸವಿಯಲು ಸಿದ್ದವಾಗುತ್ತದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ