ಮಶ್ರೂಮ್ ಕರಿ ಮಾಡುವ ವಿಧಾನ

ಸೋಮವಾರ, 17 ಆಗಸ್ಟ್ 2020 (07:50 IST)
ಬೆಂಗಳೂರು :ಮಶ್ರೂಮ್ ತಿನ್ನಲು ಎಷ್ಟು ರುಚಿಕರವೋ ಅಷ್ಟೇ ಆರೋಗ್ಯಕರವು ಹೌದು. ಆದಕಾರಣ ಮಶ್ರೂಮ್ ನಿಂದ ರುಚಿಕರವಾದ ಕರಿ ತಯಾರಿಸಿ.  

ಬೇಕಾಗುವ ಸಾಮಾಗ್ರಿಗಳು : 2 ಕಪ್ ಅಣಬೆ, 1 ಕಪ್ ಟೊಮೆಟೊ, ¾ ಕಪ್ ಈರುಳ್ಳಿ, ¾ ಕಪ್ ಕಾರ್ನ್, ½  ಕಪ್  ಬಟಾಣಿ, 2 ಹಸಿಮೆಣಸಿನ ಕಾಯಿ, ಸ್ವಲ್ಪ ಲವಂಗ, ಬೆಳ್ಳುಳ್ಳಿ, 2 ಇಂಚು ಶುಂಠಿ, 15 ಗೋಡಂಬಿ, 1 ಚಮಚ ರಸಂ ಪೌಡರ್, 3 ಚಮಚ ಎಣ್ಣೆ, ½ ಚಮಚ ಅಜ್ವೈನ್ , ¼ ಚಮಚ ಅರಶಿನ ಪುಡಿ, ಉಪ್ಪು.

ಮಾಡುವ ವಿಧಾನ : ಮೊದಲು ಗೋಡಂಬಿಯನ್ನು ನೀರಿನೊಂದಿಗೆ ರುಬ್ಬಿ ಪೇಸ್ಟ್ ತಯಾರಿಸಿ. ಬಳಿಕ ಈರುಳ್ಳಿ, ಬೆಳ್ಳುಳ್ಳಿ, ಮೆಣಸಿನಕಾಯಿ ರುಬ್ಬಿ. ಬಳಿಕ ಟೊಮೆಟೊ ಪೇಸ್ಟ್ ತಯಾರಿಸಿ. ಆಮೇಲೆ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಅಜ್ವೈನ್ ಹಾಕಿ ಅದಕ್ಕೆ ರುಬ್ಬಿಟ್ಟ ಎಲ್ಲಾ ಪೇಸ್ಟ್ ಹಾಕಿ ಚೆನ್ನಾಗಿ ಫ್ರೈ ಮಾಡಿ ಅರಶಿನ ಹಾಕಿ ನೀರು ಸೇರಿಸಿ ಕುದಿಯಲು ಬಿಡಿ. ಆಮೇಲೆ ಬಟಾಣಿ, ಜೋಳ ಹಾಕಿ ಕುದಿಸಿ. ಬಳಿಕ ರಸಂ ಪೌಡರ್ ಹಾಕಿ ಕೊನೆಯಲ್ಲಿ ಅಣಬೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಮುಚ್ಚಳ ಮುಚ್ಚಿ 2 ನಿಮಿಷ ಬೇಯಿಸಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿದರೆ ಮಸ್ರೂಮ್ ಕರಿ ರೆಡಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ