ರುಚಿ ರುಚಿಯಾದ ದಹಿ ವಡಾ (ಮೊಸರು ವಡಾ)

ಶುಕ್ರವಾರ, 14 ಸೆಪ್ಟಂಬರ್ 2018 (13:20 IST)
ಬೇಕಾಗುವ ಪದಾರ್ಥಗಳು:
 
ಉದ್ದಿನ ಬೇಳೆ- 1/2 ಕೆ.ಜಿ.
ಹಸಿ ಮೆಣಸಿನಕಾಯಿ- 10
ಒಣ ಮೆಣಸಿನ ಕಾಯಿ ಪುಡಿ- 10 ಗ್ರಾಂ
ಜೀರಿಗೆ ಪುಡಿ- 1/2 ಚಮಚ
ಹೆಚ್ಚಿದ ಈರುಳ್ಳಿ- 5
ಮೊಸರು- 1/2 ಲೀಟರ್
ಅಡುಗೆ ಸೋಡಾ- ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು
ಎಣ್ಣೆ ಕರಿಯಲು.
 
ತಯಾರಿಸುವ ವಿಧಾನ : ಉದ್ದಿನ ಬೇಳೆಯನ್ನು ಸುಮಾರು 8 ರಿಂದ 10 ಗಂಟೆಗಳ ಕಾಲ ನೆನೆಯಲು ಬಿಡಿ. ನಂತರ ಅದರ ನೀರು ತೆಗೆದು, ಉಪ್ಪು ಹಾಕಿ ರುಬ್ಬಿಕೊಳ್ಳಿ. ಅದಕ್ಕೆ ಸಣ್ಣಗೆ ಹೆಚ್ಚಿದ ಹಸಿ ಮೆಣಸಿನಕಾಯಿ, ಈರುಳ್ಳಿ, ಅಡುಗೆ ಸೋಡಾವನ್ನು ಹಾಕಿ ಚೆನ್ನಾಗಿ ಕಲಿಸಿರಿ.
 
ಅದಾದ ಮೇಲೆ ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಒಲೆಯ ಮೇಲಿಡಿ. ಎಣ್ಣೆಯು ಕರಿಯಲು ಸಿದ್ಧವಾಗಿದೆ ಎಂಬುದನ್ನು ಪರಿಶೀಲಿಸಿ ನಂತರ ಕಲಿಸಿದ ಮಿಶ್ರಣವನ್ನು ವಡೆಯ ಆಕಾರದಲ್ಲಿ ಮಾಡಿ ಎಣ್ಣೆಯಲ್ಲಿ ಹಾಕಿ ಅದು ಕೆಂಪಗೆ ಬೆಂದ ಮೇಲೆ ಅದನ್ನು ಜಾಲರಿಯಿಂದ ತೆಗೆಯಿರಿ ನಂತರ ಕಾಯಿಸಿ ತಣ್ಣಗಾದ ಬಿಸಿ ನೀರಿಗೆ ಸ್ವಲ್ಪ ಉಪ್ಪು ಹಾಕಿ ಆರಿದ ವಡೆಗಳನ್ನು ಅದರಲ್ಲಿ ಹಾಕಿ ನೆನೆಸಿರಿ. 10 ರಿಂದ 15 ನಿಮಿಷಗಳ ಕಾಲ ಬಿಟ್ಟು ವಡೆಗಳನ್ನು ತೆಗೆದು ಎರಡೂ ಕೈಗಳಿಂದ ಅದುಮಿ ನೀರನ್ನು ಹಿಂಡಿಕೊಳ್ಳಿ. ಆಮೇಲೆ ಮೊಸರಿಗೆ ಒಣ ಮೆಣಸಿನಕಾಯಿ ಪುಡಿ, ಉಪ್ಪು, ಜೀರಿಗೆ ಪುಡಿ ಹಾಕಿ ಅದಕ್ಕೆ ಸಾಸಿವೆ ಒಗ್ಗರಣೆ ಮಾಡಿ ಹಾಕಿ. ಬಳಿಕ ವಡೆ ಪ್ಲೇಟ್ ನಲ್ಲಿಟ್ಟು ಒಗ್ಗರಣೆ ಮಾಡಿದ ಮೊಸರನ್ನು ಅದರ ಮೇಲೆ ಹಾಕಿ ಸ್ವಲ್ಪ ನೆನೆಸಿದರೆ ದಹಿವಡಾ ಸವಿಯಲು ಸಿದ್ಧ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ