ನಾನ್ ವೆಜ್ ಇಷ್ಟವಿಲ್ಲದವರಿಗಾಗಿ ವೆಜಿಟೇಬಲ್ ಆಮ್ಲೆಟ್
ಶನಿವಾರ, 31 ಡಿಸೆಂಬರ್ 2016 (08:22 IST)
ಬೆಂಗಳೂರು: ನಾನ್ ವೆಜ್ ತಿನ್ನದವರಿಗೆ ಆಮ್ಲೆಟ್ ತಿನ್ನಬೇಕೆಂಬ ಆಸೆಯಿರುವವರಿಗೆ ಒಂದು ದಾರಿಯಿದೆ. ಮೊಟ್ಟೆಯ ಬದಲು ವೆಜಿಟೇಬಲ್ ಬಳಸಿ ಆಮ್ಲೆಟ್ ಮಾಡಬಹುದು. ಅದು ಹೇಗೆಂದು ಇಲ್ಲಿ ನೋಡಿ.
ಬೇಕಾಗುವ ಸಾಮಗ್ರಿಗಳು
ಮೈದಾ ಹಿಟ್ಟು
ಟೊಮೆಟೊ
ಈರುಳ್ಳಿ
ಹಸಿಮೆಣಸಿನಕಾಯಿ
ಉಪ್ಪು
ತುಪ್ಪ
ಮಾಡುವ ವಿಧಾನ
ಮೈದಾ ಹಿಟ್ಟನ್ನು ನೀರಿನಲ್ಲಿ ಕಲಸಿ ದೋಸೆ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ಇದಕ್ಕೆ ಕತ್ತರಿಸಿದ ಟೊಮೆಟೋ, ಈರುಳ್ಳಿ, ಹಸಿಮೆಣಸಿನಕಾಯಿ ಹೆಚ್ಚಿ ಹಿಟ್ಟಿಗೆ ಬೆರೆಸಿಕೊಳ್ಳಿ. ನಂತರ ಕಾದ ಕಾವಲಿ ಮೇಲೆ ತುಪ್ಪ ಹಚ್ಚಿ ಹಿಟ್ಟನ್ನು ಹುಯ್ಯಿರಿ. ಇದನ್ನು ಸಣ್ಣ ಉರಿಯಲ್ಲಿ ಬೇಯಿಸಿಕೊಂಡರೆ ವೆಜಿಟೇಬಲ್ ಆಮ್ಲೆಟ್ ರೆಡಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ