ಸೆನ್ಸೆಕ್ಸ್: 27 ಸಾವಿರ ಅಂಶಗಳ ಗಡಿ ದಾಟಿದ ಶೇರುಸಂವೇದಿ ಸೂಚ್ಯಂಕ

ಗುರುವಾರ, 30 ಜೂನ್ 2016 (17:52 IST)
ಬ್ರೆಕ್ಸಿಟ್ ಆತಂಕ ದೂರುವಾಗುತ್ತಿದ್ದಂತೆ ಶೇರುಪೇಟೆಯ ಸೂಚ್ಯಂಕ ಚೇತರಿಕೆ ಕಾಣುತ್ತಿದೆ. ಇಂದಿನ ವಹಿವಾಟಿನ ಮುಕ್ತಾಯಕ್ಕೆ ಶೇರುಸೂಚ್ಯಂಕ 300 ಪಾಯಿಂಟ್‌ ಚೇತರಿಕೆ ಕಂಡಿದೆ. 
 
ಮುಂಗಾರು ಅಧಿವೇಶನದಲ್ಲಿ ಬಹುನಿರೀಕ್ಷಿತ ಜಿಎಸ್‌ಟಿ ಮಸೂದೆ ಜಾರಿಯಾಗಲಿದೆ ಎನ್ನುವ ನಿರೀಕ್ಷೆಗಳಿಂದಾಗಿ ಹೂಡಿಕೆದಾರರು ಶೇರುಗಳ ಖರೀದಿಗೆ ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಕಳೆದ ಮೂರು ದಿನಗಳ ವಹಿವಾಟಿನ ಮುಕ್ತಾಯಕ್ಕೆ 342.15 ಪಾಯಿಂಟ್‌ಗಳ ಚೇತರಿಕೆ ಕಂಡಿದ್ದ ಬಿಎಸ್‌ಇ ಸೂಚ್ಯಂಕ, ಇಂದಿನ ವಹಿವಾಟಿನ ಮುಕ್ತಾಯಕ್ಕೆ ಮತ್ತೆ 325.15 ಪಾಯಿಂಟ್‌ಗಳ ಏರಿಕೆ ಕಂಡು 27,065.54 ಅಂಕಗಳಿಗೆ ತಲುಪಿದೆ.
 
ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ವಹಿವಾಟಿನ ಮುಕ್ತಾಯಕ್ಕೆ 99.25 ಪಾಯಿಂಟ್‌ಗಳ ಏರಿಕೆ ಕಂಡು 8,303.25 ಅಂಕಗಳಿಗೆ ತಲುಪಿದೆ.
 
ಜಪಾನ್‌ನ ನಿಕೈ ಶೇರುಪೇಟೆ ಸೂಚ್ಯಂಕ ಶೇ.0.82 ರಷ್ಟು ಏರಿಕೆ ಕಂಡಿದ್ದರೆ, ಹಾಂಗ್‌ಕಾಂಗ್‌ನ ಹಾಂಗ್‌ಸೆಂಗ್ ಸೂಚ್ಯಂಕ ಶೇ.1.73 ರಷ್ಟು ಚೇತರಿಕೆ ಕಂಡಿದೆ.
 
ಅಮೆರಿಕದ ಡೊ ಜೊನ್ಸ್ ಶೇರುಪೇಟೆ ಸೂಚ್ಯಂಕ ಕೂಡಾ ನಿನ್ನೆಯ ವಹಿವಾಟಿನ ಮುಕ್ತಾಯಕ್ಕೆ ಶೇ.1.64 ರಷ್ಟು ಏರಿಕೆ ಕಂಡಿದೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ