ಸೆನ್ಸೆಕ್ಸ್: ಭರ್ಜರಿ ವಹಿವಾಟಿನತ್ತ ಶೇರುಪೇಟೆ ಸಂವೇದಿ ಸೂಚ್ಯಂಕ

ಮಂಗಳವಾರ, 12 ಜುಲೈ 2016 (20:13 IST)
ಜಾಗತಿಕ ಮಾರುಕಟ್ಟೆಗಳ ಚೇತರಿಕೆಯ ವಹಿವಾಟಿನಿಂದಾಗಿ ಶೇರುಪೇಟೆಯ ಸೂಚ್ಯಂಕ ಇಂದಿನ ವಹಿವಾಟಿನ ಮುಕ್ತಾಯಕ್ಕೆ 181 ಪಾಯಿಂಟ್‌ಗಳ ಏರಿಕೆ ಕಂಡಿದೆ
 
ವಿದೇಶಿ ಬಂಡವಾಳದ ಒಳಹರಿವು ಮತ್ತು ಹಣದುಬ್ಬರ ದರ ಪ್ರಕಟವಾಗಲಿರುವುದರಿಂದ ಶೇರುಪೇಟೆ ಸೂಚ್ಯಂಕ ಚೇತರಿಕೆ ಕಂಡಿದೆ ಎಂದು ಮಾರುಕಟ್ಟೆಯ ಡೀಲರ್‌ಗಳು ತಿಳಿಸಿದ್ದಾರೆ.
 
ಹಿಂದಿನ ದಿನದ ವಹಿವಾಟಿನ ಮುಕ್ತಾಯಕ್ಕೆ 500 ಪಾಯಿಂಟ್‌ಗಳ ಚೇತರಿಕೆ ಕಂಡಿದ್ದ ಬಿಎಸ್‌ಇ ಸೂಚ್ಯಂಕ, ಇಂದಿನ ಆರಂಭಿಕ ವಹಿವಾಟಿನಲ್ಲಿ 181.45 ಪಾಯಿಂಟ್‌ಗಳ ಏರಿಕೆ ಕಂಡು 27,808.14 ಅಂಕಗಳಿಗೆ ತಲುಪಿದೆ.
 
ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ವಹಿವಾಟಿನ ಮುಕ್ತಾಯಕ್ಕೆ 53.15 ಪಾಯಿಂಟ್‌ಗಳ ಕುಸಿತ ಕಂಡು 8,526.60 ಅಂಕಗಳಿಗೆ ತಲುಪಿದೆ. 
 
ಎಕ್ಸಿಸ್ ಬ್ಯಾಂಕ್, ಮಾರುತಿ ಸುಜುಕಿ, ಎಚ್‌ಡಿಎಫ್‌ಸಿ, ಒಎನ್‌ಜಿಸಿ ಮತ್ತು ರಿಲಯನ್ಸ್ ಶೇರುಗಳು ವಹಿವಾಟಿನಲ್ಲಿ ಚೇತರಿಕೆ ಕಂಡಿವೆ.
 
ಜಪಾನ್‌ನ ನಿಕೈ ಶೇರುಪೇಟೆ ಸೂಚ್ಯಂಕ ಕೂಡಾ ವಹಿವಾಟಿನ ಮುಕ್ತಾಯಕ್ಕೆ ಶೇ.2.46 ರಷ್ಟು ಏರಿಕೆ ಕಂಡಿದ್ದರೆ, ಹಾಂಗ್‌ಕಾಂಗ್‌ನ ಹಾಂಗ್‌ಸೆಂಗ್ ಸೂಚ್ಯಂಕ ಶೇ.1.65 ರಷ್ಟು ಏರಿಕೆ ಕಂಡಿದೆ.ಚೀನಾದ ಶಾಂಘೈ ಶೇರುಪೇಟೆ ಕೂಡಾ ಶೇ.1.65 ರಷ್ಟು ಚೇತರಿಕೆ ಕಂಡಿದೆ.
 
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ