ಇದೀಗ, ಬಾಂಬೈ, ಕಲ್ಕತಾ ಮತ್ತು ಮದ್ರಾಸ್ ಹೈಕೋರ್ಟ್‌ಗಳಿಗೆ ಹೊಸ ಹೆಸರುಗಳು

ಮಂಗಳವಾರ, 5 ಜುಲೈ 2016 (17:50 IST)
ಸುಮಾರು ಎರಡು ದಶಕಗಳ ನಂತರ ಮದ್ರಾಸ್ ಚೆನ್ನೈ ಆಗಿದೆ, ಬಾಂಬೆ ಮುಂಬೈಯಾಗಿದೆ ಮತ್ತು ಕಲ್ಕತಾ ಕೋಲ್ಕತಾ ಹೆಸರನಿಂದ ಕರೆಯಲಾಗುತ್ತಿದೆ. ಇದೀಗ ಸಂಸತ್ತಿನ ಕಾಯ್ದೆಯಂತೆ ಮೂರು ಹೈಕೋರ್ಟ್‌ಗಳನ್ನು ಹೊಸ ಹೆಸರುಗಳಿಂದ ಕರೆಯಲು ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗಿದೆ. 
 
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸಂಪುಟ ಪುನಾರಚನೆಯಾಗುತ್ತಿದ್ದಂತೆ ಕೇಂದ್ರ ಸರಕಾರ ಹಲವು ನಿರ್ಧಾರಗಳನ್ನು ಪ್ರಕಟಿಸಿದ್ದು, ಕೋಲ್ಕತಾ, ಮುಂಬೈ ಮತ್ತು ಚೆನ್ನೈ ನಗರಗಳಲ್ಲಿರುವ ಹೈಕೋರ್ಟ್‌ಗೆ ಹೊಸ ಹೆಸರಿನ ಬಗ್ಗೆ ಘೋಷಣೆ ಮಾಡಿದೆ. 
 
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟೆಲಿಕಾಂ ಖಾತೆ ಸಚಿವ ರವಿಶಂಕರ್ ಪ್ರಸಾದ್ ಮಾತನಾಡಿ, ಇಂದಿನಿಂದ ಕಲ್ಕತ್ತಾ ಹೈಕೋರ್ಟ್‌ನ್ನು ಕೋಲ್ಕತಾ ಹೈಕೋರ್ಟ್, ಬಾಂಬೆ ಹೈಕೋರ್ಟ್‌ನ್ನು ಮುಂಬೈ ಹೈಕೋರ್ಟ್ ಮತ್ತು ಮದ್ರಾಸ್ ಹೈಕೋರ್ಟ್‌ನ್ನು ಚೆನ್ನೈ ಹೈಕೋರ್ಟ್ ಎಂದು ಕರೆಯಲಾಗುವುದು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ