ಸಾರ್ವಕಾಲಿಕ ದಾಖಲೆ ಬರೆದ ಸೆನ್ಸೆಕ್ಸ್, ನಿಫ್ಟಿ

ಶುಕ್ರವಾರ, 26 ಮೇ 2017 (15:48 IST)
ಮುಂಬೈ:ಆರಂಭಿಕ ವಹಿವಾಟಿನಲ್ಲಿ ಮುಂಬಯಿ ಶೇರು ಮಾರಕಟ್ಟೆಯ ಸೆನ್ಸೆಕ್ಸ್‌ ಸೂಚ್ಯಂಕ ಸಾರ್ವಕಾಲಿಕ ದಾಖಲೆಗಳಿಸಿದ್ದು 31 ಸಾವಿರ ಅಂಕಗಳ ಗಡಿ ದಾಟಿದೆ.
 
ಆರಂಭಿಕ ವಹಿವಾಟಿನಲ್ಲಿಯೇ ಸೆನ್ಸೆಕ್ಸ್ ನಲ್ಲಿ ಉತ್ತಮ ಬೆಳವಣಿಗೆ ಕಂಡುಬಂದಿದ್ದು, ಮಧ್ಯಾಹ್ನದ ವೇಳೆಗೆ 267.59  ಅಂಕಗಳ ಏರಿಕೆಯೊಂದಿಗೆ ಸೆನ್ಸೆಕ್ಸ್ 31 ಸಾವಿರ ಗಡಿ ದಾಟಿದೆ. ನಿಫ್ಟಿ ಕೂಡ 81.10 ಅಂಕಗಳ  ಏರಿಕೆಯೊಂದಿಗೆ 9,590.90 ಅಂಶಗಳಿಗೆ ಏರಿಕೆಯಾಗಿದ್ದು, ಟಾಟಾ ಸ್ಟೀಲ್‌, ರಿಲಯನ್ಸ್, ಐಸಿಐಸಿಐ ಬ್ಯಾಂಕ್‌ ಮತ್ತು ವೇದಾಂತ ಸಂಸ್ಥೆಗಳು ಹೆಚ್ಚಿನ ಲಾಭಾಂಶ ಕಂಡಿವೆ. 
 
ಇನ್ನು ಹಿಂಡಾಲ್ಕೊ, ಟಾಟಾ ಸ್ಟೀಲ್‌, ವೇದಾಂತ, ಭಾರ್ತಿ ಏರ್‌ಟೆಲ್‌, ಏಶ್ಯನ್‌ ಪೇಂಟ್‌ ಸಂಸ್ಥೆಗಳ ಷೇರುಗಳ ಮೌಲ್ಯ ಕೂಡ ಏರಿಕೆಯಾಗಿದೆ. ಸಿಪ್ಲಾ, ಬಿಪಿಸಿಎಲ್‌, ಎಸ್‌ಬಿಐ, ಸನ್‌ ಫಾರ್ಮಾ, ಬಾಶ್‌ ಸಂಸ್ಥೆಗಳ ಶೇರುಗಳಲ್ಲಿ ಇಳಿಕೆ ಕಂಡುಬಂದಿದೆ.
 

ವೆಬ್ದುನಿಯಾವನ್ನು ಓದಿ