ಕಳೆದ ಮೂರು ದಿನಗಳ ವಹಿವಾಟಿನಲ್ಲಿ 226.89 ಪಾಯಿಂಟ್‌ಗಳ ಕುಸಿತ ಕಂಡಿದ್ದ ಬಿಎಸ್‌ಇ ಸೂಚ್ಯಂಕ, ಇಂದಿನ ವಹಿವಾಟಿನ ಮುಕ್ತಾಯಕ್ಕೆ 284.20 ಪಾಯಿಂಟ್‌ಗಳ ಕುಸಿತ ಕಂಡು 27,697.51 ಅಂಕಗಳಿಗೆ ತಲುಪಿದೆ.
ಟಾಟಾ ಮೋಟಾರ್ಸ್, ಐಟಿಸಿ ಲಿಮಿಟೆಡ್, ಮಾರುತಿ ಸುಜುಕಿ, ವಿದ್ಯುತ್ ಗ್ರಿಡ್, ಎಲ್‌ಆಂಡ್‌ಟಿ, ರಿಲಯನ್ಸ್ ಇಂಡಸ್ಟ್ರೀಸ್, ಹಿಂದೂಸ್ತಾನ್ ಯುನಿಲಿವರ್, ಲುಪಿನ್, ಬಜಾಜ್ ಅಟೋ, ಐಸಿಐಸಿಐ ಬ್ಯಾಂಕ್, ಟಿಸಿಎಸ್ ಶೇರುಗಳು ವಹಿವಾಟಿನಲ್ಲಿ ನಷ್ಟ ಅನುಭವಿಸಿವೆ.
ಏತನ್ಮಧ್ಯೆ, ಸಿಪ್ಲಾ, ಏಷ್ಯನ್ ಪೇಂಟ್ಸ್, ಸನ್ ಫಾರ್ಮಾ ಮತ್ತು ಕೋಲ್ ಇಂಡಿಯಾ ಶೇರುಗಳು ವಹಿವಾಟಿನಲ್ಲಿ ಚೇತರಿಕೆ ಕಂಡಿವೆ.