ಕಳೆದ ಮೂರು ದಿನಗಳ ವಹಿವಾಟಿನಲ್ಲಿ 688.28 ಪಾಯಿಂಟ್ಗಳ ಏರಿಕೆ ಕಂಡಿದ್ದ ಬಿಎಸ್ಇ ಸೂಚ್ಯಂಕ, ಇಂದಿನ ಆರಂಭಿಕ ವಹಿವಾಟಿನಲ್ಲಿ ಮತ್ತೆ 50.93 ಪಾಯಿಂಟ್ಗಳ ಏರಿಕೆ ಕಂಡು 27,866.14 ಅಂಕಗಳಿಗೆ ತಲುಪಿದೆ.
ಗೃಹೋಪಕರಣ ವಸ್ತುಗಳು, ವಿದ್ಯುತ್, ಬಂಡವಾಳ ವಸ್ತುಗಳು, ಪಿಎಸ್ಯು, ಬ್ಯಾಂಕಿಂಗ್ ಮತ್ತು ಉಕ್ಕು ಕ್ಷೇತ್ರಗಳ ಶೇರುಗಳು ವಹಿವಾಟಿನಲ್ಲಿ ಚೇತರಿಕೆ ಕಂಡಿವೆ.
ಹಾಂಗ್ಕಾಂಗ್ನ ಹಾಂಗ್ಸೆಂಗ್ ಸೂಚ್ಯಂಕ ಕೂಡಾ ಇಂದಿನ ಆರಂಭಿಕ ವಹಿವಾಟಿನಲ್ಲಿ ಶೇ.0.14 ರಷ್ಟು ಏರಿಕೆ ಕಂಡಿದ್ದರೆ, ಜಪಾನ್ನ ನಿಕೈ ಸೂಚ್ಯಂಕ ಶೇ.0.76 ರಷ್ಟು ಏರಿಕೆ ಕಂಡಿದೆ. ಅಮೆರಿಕದ ಡೊ ಜೊನ್ಸ್ ಶೇರುಪೇಟೆ ಸೂಚ್ಯಂಕ ಕೂಡಾ ಶೇ.0.13 ರಷ್ಟು ಏರಿಕೆ ಕಂಡಿದೆ.