ಕಳೆದ ಎರಡು ದಿನಗಳ ವಹಿವಾಟಿನ ಮುಕ್ತಾಯಕ್ಕೆ 205.48 ಪಾಯಿಂಟ್‌ಗಳ ಕುಸಿತ ಕಂಡಿದ್ದ ಬಿಎಸ್‌ಇ ಸೂಚ್ಯಂಕ, ಇಂದಿನ ಆರಂಭಿಕ ವಹಿವಾಟಿನಲ್ಲಿ 66.94 ಪಾಯಿಂಟ್‌ಗಳ ಏರಿಕೆ ಕಂಡು 28,070.06 ಅಂಕಗಳಿಗೆ ತಲುಪಿದೆ.
ಎಫ್‌ಎಂಸಿಜಿ, ಬಂಡವಾಳ ವಸ್ತುಗಳು, ವಾಹನೋದ್ಯಮ, ಹೆಲ್ತ್‌ಕೇರ್ ಮತ್ತು ಬ್ಯಾಂಕಿಂಗ್ ಶೇರುಗಳು ಇಂದಿನ ಆರಂಭಿಕ ವಹಿವಾಟಿನಲ್ಲಿ ಶೇ.1.11 ರಷ್ಟು ಚೇತರಿಕೆ ಕಂಡಿವೆ.
ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ಆರಂಭಿಕ ವಹಿವಾಟಿನಲ್ಲಿ 11,80 ಪಾಯಿಂಟ್‌ಗಳ ಏರಿಕೆ ಕಂಡು 8,648.35 ಅಂಕಗಳಿಗೆ ತಲುಪಿದೆ.
ಜಪಾನ್‌ನ ನಿಕೈ ಶೇರುಪೇಟೆ ಸೂಚ್ಯಂಕ ಶೇ.0.68 ರಷ್ಟು ಇಳಿಕೆ ಕಂಡಿದ್ದರೆ, ಹಾಂಗ್‌ಕಾಂಗ್ ಶೇರುಪೇಟೆಗೆ ಚಂಡುಮಾರುತದ ಮುನ್ನೆಚ್ಚರಿಕೆಯಿಂದಾಗಿ ಇಂದು ಸಾರ್ವಜನಿಕ ರಜೆ ಘೋಷಿಸಲಾಗಿದೆ. ಶಾಂಘೈ ಶೇರುಪೇಟೆ ಸೂಚ್ಯಂಕ ಕೂಡಾ ಶೇ.0.04 ರಷ್ಟು ಕುಸಿತ ಕಂಡಿದೆ.