ಪಾಕಿಸ್ತಾನ ಸೇನೆ ಅತಿಕ್ರಮಣ ಮಾಡಲು ಕಾರ್ಗಿಲನ್ನೇ ಆಯ್ಕೆ ಮಾಡಿಕೊಂಡಿದ್ದೇಕೆ ಗೊತ್ತಾ?
ಶನಿವಾರ, 25 ಜುಲೈ 2020 (09:29 IST)
Normal0falsefalsefalseEN-USX-NONEX-NONE
ನವದೆಹಲಿ : ಕಾರ್ಗಿಲ್ ಯುದ್ಧ ನಡೆದು ಜುಲೈ 26ಕ್ಕೆ 21ವರ್ಷವಾಗಲಿದೆ. ಭಾರತೀಯ ಯೋಧರು ವೀರಾವೇಶದಿಂದ ಹೋರಾಡಿ ಪಾಕಿಸ್ತಾನದ ಸೈನಿಕರನ್ನು ಕಾರ್ಗಿಲ್ ನಿಂದ ಹಿಮ್ಮೆಟ್ಟಿಸಿವಿಜಯ ಪತಾಕೆ ಹಾರಿಸಿದ ದಿನ. ಆದಕಾರಣಜುಲೈ26ನ್ನು ಕಾರ್ಗಿಲ್ ವಿಜಯೋತ್ಸವ ದಿನವೆಂದು ಆಚರಿಸಲಾಗುತ್ತದೆ.
ಪಾಕಿಸ್ತಾನ ಸೇನೆ ಅತಿಕ್ರಮಣ ಮಾಡಲು ಕಾರ್ಗಿಲನ್ನೇ ಆಯ್ಕೆ ಮಾಡಿಕೊಂಡಿದ್ದೇಕೆ ಎಂಬ ಪ್ರಶ್ನೆ ಹಲವರಲ್ಲಿ ಮೂಡಬಹುದು. ಇದಕ್ಕೆಪ್ರಮುಖವಾದ ಕಾರಣವಿದೆ. ಅದೇನೆಂದರೆ ಕಾರ್ಗಿಲ್ ಪರ್ವತ ಶ್ರೇಣಿಗಳ ಮೇಲೆ ಅತಿಕ್ರಮಣ ನಡೆಸಿದರೆ ‘ಎನ್ ಎಚ್1ಡಿ’ ಮೇಲೆ ಹಿಡಿತ ಸಾಧಿಸಿ ಭಾರತೀಯ ಸೇನೆ ಲೇಹ್ ಜತೆ ಸಂಪರ್ಕ ಕಡಿದುಕೊಳ್ಳುವಂತೆ ಮಾಡಬಹುದು. ಆ ಮೂಲಕ ಸಿಯಾಚಿನ್ ನೀರ್ಗಲ್ಲು ಪ್ರದೇಶದಿಂದ ಭಾರತೀಯ ಯೋಧರು ಹಿಂದೆಸರಿಯುವಂತೆ ಮಾಡಬಹುದು. ಜೊತೆಗೆ ಕಾಶ್ಮೀರ ಸಮಸ್ಯೆ ಪರಿಹಾರಕ್ಕೆ ಭಾರತದ ಮೇಲೆ ಒತ್ತಡ ಹೇರಬಹುದು ಎಂಬುದು ಪಾಕಿಸ್ತಾನ ಲೆಕ್ಕಚಾರವಾಗಿತ್ತು. ಆದರೆ ಭಾರತೀಯ ಸೇನೆ ಅದನ್ನು ತಲೆಕೆಳಗಾಗುವಂತೆ ಮಾಡಿದೆ.