ಬಾಲಿವುಡ್‌ನಲ್ಲಿ ಕಾರ್ಗಿಲ್ ವಿಜಯೋತ್ಸವ ಸಂಭ್ರಮಾಚರಣೆ

ಶುಕ್ರವಾರ, 24 ಜುಲೈ 2020 (21:30 IST)
1999ರಲ್ಲಿ ಭಾರತೀಯ ಸೇನೆ ಕಾರ್ಗಿಲ್ ಯುದ್ಧದಲ್ಲಿ ಗೆಲುವು ಸಾಧಿಸಿದ ನಂತರ, ಬಾಲಿವುಡ್‌ನಲ್ಲಿ ಕಾರ್ಗಿಲ್ ಯುದ್ಧಕ್ಕೆ ಹೋಲುವ ಅನೇಕ ಸಿನೆಮಾಗಳು ಹೊರಬಂದವು. ಕಾರ್ಗಿಲ್ ಯುದ್ಧ ವಿಜಯ ದಿನವನ್ನು ಬಾಲಿವುಡ್ ಚಿತ್ರರಂಗ ಕೂಡ ವಿಶೇಷವಾಗಿ ಆಚರಿಸಿತು.
ಕಾರ್ಗಿಲ್ ವಿಜಯೋತ್ಸವಕ್ಕೆ ಜುಲೈ 26ರಂದು ಬರೋಬ್ಬರಿ 21 ವರ್ಷ. ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನ ವಿರುದ್ಧ ಹೋರಾಡಿ ಗೆದ್ದ ಹಾಗೂ ವೀರಮರಣ ಹೊಂದಿದೆ ಭಾರತೀಯ ಯೋಧರಿಗೆ ಗೌರವ ಸಲ್ಲಿಸುವ ವಿಶೇಷ ದಿನ ಇದಾಗಿದೆ.
 
ಬಾಲಿವುಡ್‌ನಲ್ಲಿ ಲಾಕ್ ಕಾರ್ಗಿಲ್, ಲಕ್ಷ್ಯ' 2004, ಬಾರ್ಡರ್' 1997,'ಮೌಸಮ್' 2011, ಟ್ಯಾಂಗೋ ಚಾರ್ಲಿ ಎನ್ನುವ ಚಿತ್ರಗಳು ಕಾರ್ಗಿಲ್ ಯುದ್ಧವನ್ನು ನೆನಪಿಸುತ್ತವೆ. ಬಾರ್ಡರ್‌ನಲ್ಲಿ ಸನ್ನಿ ಡಿಯೋಲ್, ಟ್ಯಾಂಗೋ ಚಾರ್ಲಿಯಲ್ಲಿ ಅಜಯ್ ದೇವಗನ್ ಸೇರಿದಂತೆ ಹಲವು ನಟರು ತಮ್ಮ ಅದ್ಭುತ ನಟನೆಯಿಂದ ಪ್ರೇಕ್ಷಕರಿಗೆ ರಸದೌತಣ ನೀಡಿರುವುದು ಮರೆಯುವಂತಿಲ್ಲ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ