ಯುವ ಕುಸ್ತಿಪಟುವಿನ ಹತ್ಯೆ: ಒಲಿಂಪಿಕ್ ಪದಕ ವಿಜೇತ ಸುಶೀಲ್ ಕುಮಾರ್ ಹೆಸರು ಶಾಮೀಲು

ಗುರುವಾರ, 6 ಮೇ 2021 (09:34 IST)
ನವದೆಹಲಿ: ಕುಸ್ತಿಪಟುಗಳ ಎರಡು ಗುಂಪುಗಳ ನಡುವೆ ನಡೆದ ಮಾರಾಮಾರಿಯಲ್ಲಿ ಓರ್ವ ಯುವ ಕುಸ್ತಿ ಪಟು ಸಾವಿಗೀಡಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಲಿಂಪಿಕ್ ಪದಕ ವಿಜೇತ ಸುಶೀಲ್ ಕುಮಾರ್ ಸೇರಿದಂತೆ ಹಲವರ ವಿರುದ್ಧ ಎಫ್ ಐಆರ್ ದಾಖಲಾಗಿದೆ.


ದೆಹಲಿಯ ಛತ್ರಾಸಾಲ್ ಮೈದಾನದಲ್ಲಿ ಇಬ್ಬರು ಸ್ನೇಹಿತರ ಗುಂಪಿನ ನಡುವೆ ನಡೆದ ಘರ್ಷಣೆಯಲ್ಲಿ 23 ವರ್ಷದ ಯುವ ಕುಸ್ತಿಪಟು ಸಾವಿಗೀಡಾಗಿದ್ದಾನೆ. ಈ ಘರ್ಷಣೆಯಲ್ಲಿ ಸುಶೀಲ್ ಕುಮಾರ್ ಕೂಡಾ ಭಾಗಿಯಾಗಿದ್ದಾರೆ ಎಂಬ ಆರೋಪದ ಹಿನ್ನಲೆಯಲ್ಲಿ ಅವರ ಹೆಸರನ್ನೂ ಎಫ್ ಐಆರ್ ನಲ್ಲಿ ದಾಖಲಿಸಲಾಗಿದೆ.

ಈ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದೀಗ ಸ್ಥಳದಿಂದ ಒಂದು ಡಬಲ್ ಬ್ಯಾರೆಲ್ ಗನ್ ಕೂಡಾ ವಶಪಡಿಸಿಕೊಳ್ಳಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ