ಕೆಳ ಕ್ರಮಾಂಕದಲ್ಲಿ ಸರ್ಫರಾಜ್ ಖಾನ್ ಸಿಡಿಸಿದ ಶತಕದ ನೆರವಿನಿಂದ ಮುಂಬೈ ತಂಡ ರಣಜಿ ಟ್ರೋಫಿ ಫೈನಲ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಮಧ್ಯಪ್ರದೇಶ ವಿರುದ್ಧ 374 ರನ್ ಗಳಿಗೆ ಆಲೌಟಾಗಿದೆ.
ಬೆಂಗಳೂರಿನಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನವಾದ ಗುರುವಾರ ಮುಂಬೈ 248 ರನ್ ಗೆ 5 ವಿಕೆಟ್ ಗಳಿಂದ ಆಟ ಮುಂದುವರಿಸಿದ ಮುಂಬೈ ಭೋಜನ ವಿರಾಮದ ನಂತರ 374 ರನ್ ಗಳಿಗೆ ಪತನಗೊಂಡಿತು.
ಕೆಳ ಕ್ರಮಾಂಕದಲ್ಲ್ ಸರ್ಫರಾಜ್ ಖಾನ್ 243 ಎಸೆತಗಳಲ್ಲಿ 13 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ 134 ರನ್ ಬಾರಿಸಿದರು. ಇದು ಸರ್ಫರಾಜ್ ಪ್ರಸಕ್ತ ಋತುವಿನಲ್ಲಿ ಗಳಿಸಿದ 4ನೇ ಶತಕವಾಗಿದೆ.
ಮಧ್ಯಪ್ರದೇಶ ಪರ ಗೌರವ್ ಯಾದವ್ 4 ವಿಕೆಟ್ ಗಳಿಸಿದರೆ, ಅನುಭವ್ ಅಗರ್ ವಾಲ್ 3 ವಿಕೆಟ್ ಕಬಳಿಸಿ ಮುಂಬೈ ತಂಡವನ್ನು ನಿಯಂತ್ರಿಸಿದರು.