ಫ್ರಾನ್ಸ್ ವಿರುದ್ಧ ಯೂರೊ 2016ರ ಫೈನಲ್ ಪಂದ್ಯದಲ್ಲಿ ಗಾಯಗೊಂಡಿದ್ದ ಪೋರ್ಚುಗಲ್ ಸ್ಟಾರ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಮುಂಬರುವ ಸೀಸನ್ನಲ್ಲಿ ಮತ್ತೆ ಪ್ರಬಲರಾಗಿ ಕಮ್ಬ್ಯಾಕ್ ಆಗುವುದಾಗಿ ತಿಳಿಸಿದ್ದಾರೆ. ತಮ್ಮ ತಂಡ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಿಯಲ್ ಮ್ಯಾಡ್ರಿಡ್ ಸ್ಟ್ರೈಕರ್ ಫೈನಲ್ ಮೊದಲಾರ್ಧದಲ್ಲಿ ಮಂಡಿ ಗಾಯದಿಂದ ಕಣ್ಣೀರುಹರಿಸುತ್ತಾ ಹೊರಬಂದಿದ್ದರು.