ಬೆಂಗಳೂರಿನಲ್ಲಿ ಡಿ.ಸಿ.ಪಿ. ಕಾರು ಜಖಂ...!!!

ಭಾನುವಾರ, 4 ಸೆಪ್ಟಂಬರ್ 2022 (18:32 IST)
ಕೊಂಬೆ ಬಿದ್ದು ಡಿಸಿಪಿ ಕಾರು ಜಖಂಗೊಂಡ ಘಟನೆ ಜಯನಗರದದಕ್ಷಿಣವಿಭಾಗ ಡಿಸಿಪಿ ಕಚೇರಿಯ ಆವರಣದಲ್ಲಿ ನಡೆದಿದೆ.
 
ದಕ್ಷಿಣ ವಿಭಾಗದ ಡಿಸಿಪಿ ಕೃಷ್ಣ ಕಾಂತ್ ಅವರು ಇನ್ನೋವಾ ಕಾರಿನಿಂದ ಇಳಿದು ಕಚೇರಿಗೆ ತೆರಳಿದ 5 ನಿಮಿಷದ ಬಳಿಕ ಕೊಂಬೆ ಬಿದ್ದಿದೆ.
 
ಡಿಸಿಪಿಯವರು ಇಳಿದ ಬಳಿಕ ಚಾಲಕ ಕಾರಿನಲ್ಲೇ ಕುಳಿತಿದ್ದರು. ಈ ವೇಳೆ ಮೊಬೈಲಿಗೆ ಕರೆ ಬಂದಿದೆ. ಕರೆ ಬಂದ ಹಿನ್ನೆಲೆಯಲ್ಲಿ ಕಾರಿನಿಂದ ಇಳಿದು ಹೊರ ಬಂದು ಮಾತನಾಡುತ್ತಿದ್ದಾಗ ಘಟನೆ ನಡೆದಿದೆ. ಕೊಂಬೆ ಚಾಲಕ ಕುಳಿತಿದ್ದ ಸ್ಥಳದ ಮೇಲೆ ಬಿದ್ದಿದೆ. ಒಂದು ವೇಳೆ ಚಾಲಕ ಕಾರಿನಲ್ಲಿ ಇದ್ದಿದ್ದರೆ ಗಂಭೀರವಾದ ಗಾಯಗಳಾಗಿರುವುದು..

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ