ಡಬಲ್ಸ್ ಸೋತಿದ್ದರೂ ಸಾನಿಯಾಗೆ ಮಿಶ್ರ ಡಬಲ್ಸ್‌ನಲ್ಲಿ ಪದಕ ಗೆಲ್ಲುವ ವಿಶ್ವಾಸ

ಸೋಮವಾರ, 8 ಆಗಸ್ಟ್ 2016 (13:23 IST)
ಮಹಿಳಾ ಡಬಲ್ಸ್‌ನಲ್ಲಿ ಅನನುಭವಿ ಜೋಡಿ ಪ್ರಾರ್ಥನಾ ತೊಂಬಾರೆಯೊಂದಿಗೆ ಮೊದಲ ಸುತ್ತಿನಲ್ಲೇ ಸೋಲನುಭವಿಸಿದ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮಿಶ್ರ ಡಬಲ್ಸ್‌ನಲ್ಲಿ ಭಾರತಕ್ಕೆ ಪದಕ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು. ಭಾರತ ನನ್ನಿಂದ ಚಿನ್ನದ ಪದಕವನ್ನು ಬಯಸುತ್ತದೆ. ಆದರೆ ಕ್ರೀಡೆಯಲ್ಲಿ ಯಾವುದೇ ಖಚಿತತೆ ಇಲ್ಲ. ನಾವು ಶ್ರೇಷ್ಟ ಪ್ರದರ್ಶನ ನೀಡಿ ಪದಕ ಗೆಲುವಿಗೆ ಯತ್ನಿಸುತ್ತೇವೆ ಎಂದು ಸಾನಿಯಾ ವರದಿಗಾರರಿಗೆ ಹೇಳಿದರು.
 
 ರೋಹನ್ ಬೋಪಣ್ಣ ಮತ್ತು ಸಾನಿಯಾ ಜೋಡಿ ಮಿಶ್ರ ಡಬಲ್ಸ್ ಆಡಲಿದ್ದು, ಪುರುಷರ ಮತ್ತು ಮಹಿಳಾ ಡಬಲ್ಸ್‌ನಲ್ಲಿ ಸೋತ ಬಳಿಕ ಉಳಿದಿರುವ ಏಕಮಾತ್ರ ಸ್ಪರ್ಧೆ ಇದಾಗಿದೆ.
 
 ಕಠಿಣವಾದ ಸೋಲಿನ ಬಳಿಕ ತಮ್ಮ ಜತೆಗಾರ್ತಿ ಪ್ರಾರ್ಥನಾ ತೊಂಬಾರೆಯನ್ನು ಅವರು ಸಮರ್ಥಿಸಿಕೊಂಡರು. ಪ್ರಾರ್ಥನಾಳನ್ನು ದೂರಬೇಡಿ. ಅವಳಿನ್ನೂ 190ನೇ ಶ್ರೇಯಾಂಕದಲ್ಲಿದ್ದಾರೆ. ಟಾಪ್ 50ರಲ್ಲಿರುವ ಸ್ಪರ್ಧಿಗಳ ಜತೆ ಅವಳು ಆಡಿದ್ದಾಳೆ ಎಂದು ಸಾನಿಯಾ ಹೇಳಿದರು.

ವೆಬ್ದುನಿಯಾವನ್ನು ಓದಿ