ಏಷ್ಯನ್ ಗೇಮ್ಸ್ ನಲ್ಲಿ ಕಂಚು ಗೆದ್ದು ಇತಿಹಾಸ ನಿರ್ಮಿಸಿದ ಸೈನಾ ನೆಹ್ವಾಲ್ ಗೆ ಅಪ್ಪ ಕೊಟ್ಟ ಆ ಸ್ಪೆಷಲ್ ಗಿಫ್ಟ್ ಏನು ಗೊತ್ತಾ?

ಶುಕ್ರವಾರ, 31 ಆಗಸ್ಟ್ 2018 (09:04 IST)
ಹೈದರಾಬಾದ್: ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಇತ್ತೀಚೆಗೆ ಏಷ್ಯನ್ ಗೇಮ್ಸ್ ನಲ್ಲಿ 36 ವರ್ಷಗಳ ಬಳಿಕ ಭಾರತದ ಪರವಾಗಿ ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದರು.

ಪುತ್ರಿಯ ಬೆನ್ನಿಗೆ ಬೆಂಬಲವಾಗಿ ಸದಾ ನಿಲ್ಲುವ ಸೈನಾ ತಂದೆ ಹರ್ ವೀರ್ ಈ ಸಾಧನೆಗೆ ವಿಶೇಷ ಗಿಫ್ಟ್ ಕೊಟ್ಟು ಅಭಿನಂದಿಸಿದ್ದಾರೆ. ತಂದೆಯ ಗಿಫ್ಟ್ ನೋಡಿ ಸೈನಾ ಕಂಚಿನ ಪದಕ ಗೆದ್ದಿದ್ದಕ್ಕಿಂತಲೂ ಖುಷಿಯಾಗಿ ಸೋಷಿಯಲ್ ಮೀಡಿಯಾದಲ್ಲಿ ಸಂಭ್ರಮಿಸಿದ್ದಾರೆ.

ಅಷ್ಟಕ್ಕೂ ಸೈನಾ ತಂದೆ ನೀಡಿದ ಗಿಫ್ಟ್ ಏನು ಗೊತ್ತಾ? ಸುಂದರ ಡೈಮಂಡ್ ರಿಂಗ್ ಒಂದನ್ನು ಪುತ್ರಿಗೆ ಗಿಫ್ಟ್ ಕೊಟ್ಟಿದ್ದಾರೆ ತಂದೆ ಹರ್ ವೀರ್. ಇದನ್ನು ಟ್ವಿಟರ್ ನಲ್ಲಿ ಪ್ರಕಟಿಸಿರುವ ಸೈನಾ ‘ಏಷ್ಯನ್ ಗೇಮ್ಸ್ ಮೆಡಲ್ ಬಳಿಕ ಅಪ್ಪನ ವಿಶೇಷ ಗಿಫ್ಟ್.  ಥ್ಯಾಂಕ್ಯೂ’ ಎಂದು ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ