ಆಸ್ತಿ ವಿಚಾರವನ್ನು ಮುಚ್ಚಿಟ್ಟ ಪ್ರಕರಣದಲ್ಲಿ ಟೆನಿಸ್ ದಂತಕತೆ ಬೋರಿಸ್ ಬೇಕರ್ ಗೆ ಬ್ರಿಟನ್ ನ್ಯಾಯಾಲಯ ಎರಡೂವರೆ ವರ್ಷ ಜೈಲು ಶಿಕ್ಷೆ ವಿಧಿಸಿದೆ.
6 ಬಾರಿಯ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ವಿಜೇತ ಹಾಗೂ ವಿಂಬಲ್ಡನ್ ಚಾಂಪಿಯನ್ ಆಗಿರುವ 54 ವರ್ಷ ಬೋರಿಸ್ ಬೇಕರ್ 2017ರಲ್ಲಿ ಭಾರೀ ಮೊತ್ತದ ಹಣವನ್ನು ಉದ್ಯಮದಲ್ಲಿ ಬಂಡವಾಳ ಹೂಡಿದ್ದರು. ಆದರೆ ಈ ವ್ಯವಹಾರವನ್ನು ಮುಚ್ಚಿಟ್ಟಿದ್ದರು.
ಬೋರಿಸ್ ಬೇಕರ್ ತಮ್ಮ ಭಾರೀ ಮೊತ್ತದ ಹೂಡಿಕೆ ಹಾಗೂ 8,25,000 ಪೌಂಡ್ ಮೊತ್ತದ ಆಸ್ತಿಯನ್ನು ಕೂಡ ಘೋಷಿಸಿಕೊಳ್ಳದೇ ಮುಚ್ಚಿಟ್ಟಿದ್ದರು. ಇದು ಅಲ್ಲದೇ ಸುಮಾರು 20 ಅಕ್ರಮ ಆಸ್ತಿ ಸಂಪಾದನೆ ಆರೋಪದಲ್ಲಿ ಸೌಥ್ ವ್ರಾಕ್ ಕ್ರೌನ್ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ.