ರಾಗಿ ಸಿಹಿಯುಂಡೆ

ಬೇಕಾಗುವ ಸಾಮಗ್ರಿ- ರಾಗಿ ಒಂದು ಕಪ್, ಬೆಲ್ಲ ಸ್ವಲ್ಪ, ಗೋಡಂಬಿ, ದ್ರಾಕ್ಷಿ ಸ್ವಲ್ಪ, ಕೊಬ್ಬರಿ ತುರಿ ಸ್ವಲ್ಪ, ಹಾಲು ಸ್ವಲ್ಪ.

ಮಾಡುವ ವಿಧಾನ- ರಾಗಿಯನ್ನು ತೊಳೆದು ಒಣಗಿಸಿ ಹುರಿದು ಪುಡಿ ಮಾಡಿ ಅದಕ್ಕೆ ಗೋಡಂಬಿ ಪುಡಿ ಮಾಡಿ ಹಾಕಬೇಕು. ನಂತರ ಬೆಲ್ಲ ಹಾಕಬೇಕು. ನಂತರ ಬೇಕಾಗುವಷ್ಟು ಹಾಲು ಹಾಕಿ ಅದನ್ನು ಉಂಡೆ ಮಾಡಬೇಕು. ನಂತರ ಈ ಉಂಡೆಯನ್ನು ಕೊಬ್ಬರಿ ತುರಿಯಲ್ಲಿ ಉರುಳಿಸಿ ದ್ರಾಕ್ಷಿಯನ್ನು ಅದರ ಮೇಲೆ ಇಡಬೇಕು. ರಾಗಿ ಸಿಹಿಯುಂಡೆ ರೆಡಿ. ಇದು ಬೇಸಗೆಯಲ್ಲಿ ತಿನ್ನಲು ಅತ್ಯುತ್ತಮ. ಅತ್ಯಂತ ತಂಪಾಗಿರುವ ಇದು ಹೊಟ್ಟೆಗೆ ಒಳ್ಳೆಯದು.

ವೆಬ್ದುನಿಯಾವನ್ನು ಓದಿ