ಬೇಕಾಗುವ ಸಾಮಗ್ರಿ- ಒಂದು ಲೋಟ ಅವಲಕ್ಕಿ, ಒಂದು ಲೋಟ ಸಕ್ಕರೆ ಪುಡಿ, ಒಂದು ಚಮಚ ಏಲಕ್ಕಿ, ಸ್ವಲ್ಪ ತುಪ್ಪ, ಸ್ವಲ್ಪ ಕೊಬ್ಬರಿ.
ಮಾಡುವ ವಿಧಾನ- ಮೊದಲು ಬಾಣಲೆಗೆ ಅವಲಕ್ಕಿ ಹಾಕಿ ಎಣ್ಣೆ ಹಾಕದೆ ಹುರಿಯಿರಿ. ಹುರಿದ ಅವಲಕ್ಕಿ ತಣ್ಣಗಾದ ಮೇಲೆ ಮಿಕ್ಸಿಗೆ ಹಾಕಿ ಪುಡಿ ಮಾಡಿ. ಕೊಬ್ಬರಿ ತುರಿ, ಏಲಕ್ಕಿ ಪುಡಿ, ಸಕ್ಕರೆ ಪುಡಿಯ ಜೊತೆ ಪುಡಿ ಮಾಡಿದ ಅವಲಕ್ಕಿ ಸೇರಿಸಿ. ಈ ಮಿಶ್ರಣಕ್ಕೆ ತುಪ್ಪ ಸೇರಿ ಉಂಡೆ ಮಾಡಿ. ಅವಲಕ್ಕಿ ಬಾಲ್ಸ್ ರೆಡಿ.