ಬೇಕಾಗುವ ಪದಾರ್ಥ: ಖರ್ಜೂರ, ಬೆಲ್ಲ, ತೆಂಗಿನಕಾಯಿ, ಗೋಡಂಬಿ, ಏಲಕ್ಕಿ ಪುಡಿ, ಬೀಜ ಇತ್ಯಾದಿ ಮಾಡುವ ವಿಧಾನ: ತೆಂಗಿನಕಾಯಿ ತುರಿ ಮಿಕ್ಸಿಗೆ ಹಾಕಿ ಹಾಲು ಮಾಡಿ ಹಿಂಡಿಟ್ಟುಕೊಳ್ಳಬೇಕು. ಬೀಜ ತೆಗೆದ ಖರ್ಜೂರವನ್ನು ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿ ಹಾಲು ತಯಾರಿಸಿಟ್ಟುಕೊಳ್ಳಬೇಕು. ನಂತರ ಎರಡೂ ಮಿಶ್ರಣವನ್ನು ಒಲೆಯ ಮೇಲಿಡಿ. ಹಾಲು ಬೆಚ್ಚಗಾಗುತ್ತ ಬಂದ ಹಾಗೆ ಬೆಲ್ಲದ ಪುಡಿ, ಉಪ್ಪು, ಏಲಕ್ಕಿ ಪುಡಿ ಹಾಕಿ ಬೆರೆಸಿ ಚೆನ್ನಾಗಿ ಕುದಿಸಿ. ಕೊನೆಗೆ ಗೋಡಂಬಿ ಚೂರು ಬೆರೆಸಿ ಪಾತ್ರೆ ಇಳಿಸಿ.