ಹಾಲು ಪಾಯಸ

ಬೇಕಾಗುವ ಸಾಮಗ್ರಿ: ಒಂದು ಕಪ್ ಚೆನ್ನಾಗಿ ಬೆಂದ ಬೆಳ್ತಿಗೆ ಅಕ್ಕಿಯ ಅನ್ನ, ಎರಡು ಕಪ್ ಹಾಲು, ಎರಡು ಚಮಚ ಹಾಲಿನ ಪುಡಿ, ಚಿಟಿಕೆಯಷ್ಟು ಏಲಕ್ಕಿ ಪುಡಿ, ಒಂದು ಚಮಚ ತುಪ್ಪ, ದ್ರಾಕ್ಷಿ, ಗೋಡಂಬಿ. ಮಾಡುವ ವಿಧಾನ: ಹಾಲು, ಹಾಲಿನ ಪುಡಿಗಳನ್ನು ಚೆನ್ನಾಗಿ ಬೆರೆಸಿಡಿ. ದಪ್ಪತಳದ ಪಾತ್ರೆಗೆ ಅನ್ನ ಹಾಕಿ ಹಾಲು ಸೇರಿಸಿ ಸಣ್ಣ ಉರಿಯಲ್ಲಿ ಕುದಿಸಿ. ಅನ್ನ ಹಾಗೂ ಹಾಲು ಚೆನ್ನಾಗಿ ಬೆರೆತ ಮೇಲೆ ಹಾಲು ಕಡಿಮೆಯಾದಂತೆ ಕಂಡರೆ ಬೇಕಿದ್ದರೆ ಹಾಲ ಸೇರಿಸಿ. ನಂತರ ತುಪ್ಪ, ಸಕ್ಕರೆ, ಏಲಕ್ಕಿ, ದ್ರಾಕ್ಷಿ, ಗೋಡಂಬಿ ಹಾಕಿ ಹತ್ತು ನಿಮಿಷ ಕುದಿಸಿ. ದಿಢೀರ್ ಹಾಲು ಪಾಯಸ ರೆಡಿ.

ವೆಬ್ದುನಿಯಾವನ್ನು ಓದಿ