ಕಿರುತೆರೆಗೆ ಶಶಿಕುಮಾರ್, ಹರಿಕೃಷ್ಣ, ಮಹೇಶ್ ಬಾಬು

PR
ಶಿವಮಣಿಯ ಕ್ಲಾಸ್ ಮೇಟ್, ರವಿ ಗರಣಿಯ ಕೃಷ್ಣ ರುಕ್ಮಿಣಿ, ಮಿಲನ ಖ್ಯಾತಿಯ ಪ್ರಕಾಶ್‌ರ ಲಕುಮಿ, ಸಿಹಿಕಹಿ ಚಂದ್ರು ಅವರ ಬೊಂಬಾಟ್ ಭೋಜನ, ಆನಂದ್‌ರ ಪಡುವಾರಳ್ಳಿ ಪಡ್ಡೆಗಳು, ಬಾಲಾ ಸುರೇಶ್ ಅವರ ಗುರು ರಾಘವೇಂದ್ರ ವೈಭವ ಮುಂತಾದ ಜನಪ್ರಿಯ ಧಾರಾವಾಹಿಗಳನ್ನು ಹೊಂದಿರುವ ಸುವರ್ಣ ವಾಹಿನಿ ಈಗ ಇನ್ನೊಂದು ಮಹತ್ವದ ಧಾರಾವಾಹಿಯನ್ನು ವೀಕ್ಷಕರ ಮುಂದಿಡುತ್ತಿದೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಅಚ್ಚರಿ ಅಂದರೆ, ಸುಪ್ರೀಂ ಹೀರೋ ಶಶಿಕುಮಾರ್, ಕನ್ನಡ ಚಿತ್ರರಂಗದ ಸದ್ಯದ ನಂಬರ್ ವನ್ ಸಂಗೀತ ನಿರ್ದೇಶಕ ವಿ. ಹರಿಕೃಷ್ಣ, ಯಶಸ್ವೀ ನಿರ್ದೇಶಕ ಮಹೇಶ್ ಬಾಬು ಮತ್ತು ದಾಖಲೆ ವೀರ ಮಾಸ್ಟರ್ ಕಿಶನ್ ಅವರುಗಳನ್ನು ಕಿರುತೆರೆಗೆ ಸುವರ್ಣ ಕರೆ ತಂದಿರುವುದು. ಇದೆಲ್ಲ ಸಾಧ್ಯವಾಗಿರುವುದು 'ಅಣ್ಣ-ತಂಗಿ' ಮೂಲಕ.

'ಅಣ್ಣ-ತಂಗಿ' ಸುವರ್ಣ ಚಾನೆಲ್‌ನಲ್ಲಿ ಅಕ್ಟೋಬರ್ 3ರಿಂದ ಪ್ರತಿದಿನ ಸಂಜೆ 6.30ಕ್ಕೆ ಪ್ರಸಾರವಾಗಲಿರುವ ಭಾವನಾತ್ಮಕ ತುಮುಲಗಳ ಧಾರಾವಾಹಿ. ಆದರೆ ಮಾಮೂಲಿ ಧಾರಾವಾಹಿ ಇದಲ್ಲ, ಸದಾ ಹೊಸತನಕ್ಕೆ ತುಡಿಯುತ್ತಿರುವ ನಮ್ಮದು ಇಲ್ಲೂ ಭಿನ್ನತೆಯಿದೆ ಎಂದು ಚಾನೆಲ್ ಹೇಳಿಕೊಂಡಿದೆ.

ಮಾಜಿ ಸಂಸದ ಶಶಿಕುಮಾರ್ 'ಅಣ್ಣ-ತಂಗಿ'ಯಲ್ಲಿ ಮಹತ್ವದ ಪಾತ್ರ ಮಾಡುತ್ತಿದ್ದಾರೆ. ಹರಿಕೃಷ್ಣ ಶೀರ್ಷಿಕೆ ಸಂಗೀತ ನೀಡುತ್ತಿದ್ದಾರೆ. ಆಕಾಶ್, ಅರಸು ಮತ್ತು ಮೆರವಣಿಗೆಗಳಂತಹ ಸೂಪರ್ ಹಿಟ್ ಚಿತ್ರಗಳನ್ನು ನಿರ್ದೇಶಿಸಿರುವ ಮಹೇಶ್ ಬಾಬು ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಅಣ್ಣನಾಗಿ ಸಾಯಿಕೃಷ್ಣ ಹಾಗೂ ತಂಗಿಯಾಗಿ ಸಂಜನಾ ಕಾಣಿಸಿಕೊಳ್ಳುತ್ತಿದ್ದಾರೆ.

ಇದೊಂದು ಗ್ರಾಮೀಣ ಸೊಗಡಿನ ಧಾರಾವಾಹಿ. ಕಿರುತೆರೆ ನನಗೇನೂ ಹೊಸತಲ್ಲ. ಈ ಹಿಂದೆಯೂ ಧಾರಾವಾಹಿಗಳಿಗೆ ಕೆಲಸ ಮಾಡಿದ್ದೇನೆ. ಆದರೆ ಇದನ್ನು ಒಪ್ಪಿಕೊಳ್ಳಲು ಕಾರಣ ಶಿವು ಹಿರೇಮಠ್. ಹೊಸತನ ಉಣ ಬಡಿಸುವ ನಿರೀಕ್ಷೆಗಳನ್ನು ಈಡೇರಿಸುವ ಭರವಸೆ ನಮ್ಮದು ಎಂದು ಹೇಳಿದ್ದಾರೆ ನಿರ್ದೇಶಕ ಮಹೇಶ್ ಬಾಬು.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

ವೆಬ್ದುನಿಯಾವನ್ನು ಓದಿ