ಧಾರವಾಹಿ ಶೂಟಿಂಗ್ ನಿಲ್ಲಿಸಲು ನಟರಿಂದಲೇ ಒತ್ತಾಯ

ಶನಿವಾರ, 21 ಮಾರ್ಚ್ 2020 (09:07 IST)
ಬೆಂಗಳೂರು: ಕೊರೋನಾವೈರಸ್ ಹರಡುವಿಕೆ ತಡೆಯಲು ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಭಾನುವಾರದಿಂದ ಒಂದು ವಾರಗಳ ಕಾಲ ಧಾರವಾಹಿಗಳ ಶೂಟಿಂಗ್ ನಿಲ್ಲಿಸಲು ಸೂಚನೆ ನೀಡಿದೆ.


ಆದರೆ ಸೂಚನೆ ನೀಡಿ ಎರಡು ದಿನಗಳ ಕಾಲಾವಕಾಶ ನೀಡಲಾಗಿತ್ತು. ಈ ಅವಧಿಯಲ್ಲಿ ಸಾಧ‍್ಯವಾದಷ್ಟು ಚಿತ್ರೀಕರಿಸಿಕೊಂಡು ಎಪಿಸೋಡ್ ಪ್ರಸಾರ ಮಾಡಲು ಧಾರವಾಹಿ ತಂಡಗಳು ಚಿಂತನೆ ನಡೆಸುತ್ತಿವೆ.

ಆದರೆ ಇದು ಅಪಾಯಕಾರಿ. ಶೂಟಿಂಗ್ ನಿಲ್ಲಿಸಿ ಎಂದು ಹಲವು ಧಾರವಾಹಿಗಳ ನಟರು ಒತ್ತಾಯಿಸಿರುವುದರಿಂದ ಕೆಲವು ಧಾರವಾಹಿಗಳು ಈಗಾಗಲೇ ಶೂಟಿಂಗ್ ಬಂದ್ ಮಾಡಿವೆ. ಮತ್ತೆ ಕೆಲವು ಇಂದಿನವರೆಗೂ ಸಾಧ‍್ಯವಾದಷ್ಟು ಶೂಟಿಂಗ್ ನಡೆಸಲಿವೆ.

ಹೆಚ್ಚಿನ ಧಾರವಾಹಿಗಳೂ ಈಗ ಏಪ್ರಿಲ್ ಮೊದಲ ವಾರದವರೆಗೂ ಪ್ರಸಾರ ಮಾಡುವಷ್ಟು ಕಂತುಗಳನ್ನು ಚಿತ್ರೀಕರಿಸಿಕೊಂಡಿವೆ. ಅಷ್ಟೊಂದು ಬ್ಯಾಂಕಿಂಗ್ ಎಪಿಸೋಡ್ ಇಲ್ಲದ ಧಾರವಾಹಿಗಳು ರಿಪೀಟೆಡ್ ಟೆಲಿಕಾಸ್ಟ್ ಮಾಡಲಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ