ಒಲಿಂಪಿಕ್ ನಡೆಸಲು ಕೊರೋನಾವೈರಸ್ ಮುಚ್ಚಿಡುತ್ತಿದೆಯಾ ಜಪಾನ್?

ಶುಕ್ರವಾರ, 20 ಮಾರ್ಚ್ 2020 (09:03 IST)
ಟೋಕಿಯೋ: ಕೊರೋನಾವೈರಸ್ ನಿಂದಾಗಿ ಹಲವಾರು ಕ್ರೀಡಾಕೂಟಗಳು ರದ್ದಾಗಿವೆ. ಕ್ರೀಡಾ ಕೂಟಗಳು ರದ್ದಾದರೆ ಕೋಟಿ ಕೋಟಿ ನಷ್ಟವಾಗುತ್ತದೆ. ಇದು ಎಲ್ಲಾ ರಾಷ್ಟ್ರಗಳಿಗೂ ಇಕ್ಕಟ್ಟಿನ ವಿಷಯವಾಗಿದೆ.


ಜಪಾನ್ ನಲ್ಲಿ ಜೂನ್ ನಲ್ಲಿ ಒಲಿಂಪಿಕ್ಸ್ ಕ್ರೀಡಾ ಕೂಟ ನಡೆಯಲಿದ್ದು, ಕೊರೋನಾದಿಂದಾಗಿ ಕೂಟ ರದ್ದಾದರೆ ಜಪಾನ್ ಸಾವಿರಾರು ಕೋಟಿ ರೂ. ನಷ್ಟ ಅನುಭವಿಸಬೇಕಾಗುತ್ತದೆ. ಇದನ್ನು ತಡೆಗಟ್ಟಲು ಅಲ್ಲಿನ ಸರ್ಕಾರ ಕೊರೋನಾ ಪ್ರಕರಣಗಳನ್ನು ಮುಚ್ಚಿಹಾಕುವ ಪ್ರಯತ್ನ ನಡೆಸುತ್ತಿದೆ ಎಂದು ಟ್ವಿಟರಿಗರು ಆರೋಪಿಸಿದ್ದಾರೆ.

ಕೊರೋನಾ ಪ್ರಕರಣಗಳನ್ನು ಮುಚ್ಚಿಟ್ಟು ನಮ್ಮಲ್ಲಿ ಹೆಚ್ಚು ಪ್ರಕರಣಗಳು ವರದಿಯಾಗಿಲ್ಲ ಎಂದು ಬಿಂಬಿಸಿ ಒಲಿಂಪಿಕ್ಸ್ ನಡೆಸುವ ಹುನ್ನಾರ ನಡೆಸಿದೆ ಎಂಬುದು ಟ್ವಿಟರಿಗರ ಆರೋಪ. ಇದಕ್ಕೆ ಪ್ರತಿಕ್ರಿಯಿಸಿರುವ ಭಾರತೀಯ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಒಂದು ವೇಳೆ ಇದು ನಿಜವಾದರೆ ಇದು ನಿಜಕ್ಕೂ ಅಪಾಯಕಾರಿ. ದಯವಿಟ್ಟು ಎಲ್ಲರೂ ಸುರಕ್ಷಿತವಾಗಿರಿ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ